ದೆಹಲಿ: ಬಾಲಿವುಡ್‌ ಹೀರೋ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2: ದಿ ರಿವೆಂಜ್’ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಆರಂಭವನ್ನು ಪಡೆದಿದ್ದು, ಮೊದಲ ದಿನ ಬರೋಬ್ಬರಿ ₹145.55 ಕೋಟಿ ಗಳಿಸಿದೆ. ಕೇವಲ ಮೊದಲ ದಿನದ (ಶುಕ್ರವಾರ) ಕಲೆಕ್ಷನ್ ₹102.55 ಕೋಟಿ ಆಗಿದೆ.

ಮೊದಲ ದಿನ ಭಾರತದಲ್ಲಿ ಸುಮಾರು 21,728 ಶೋಗಳ ಪ್ರದರ್ಶನ ಕಂಡಿತ್ತು. ಈ ಶೋಗಳಿಂದ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ರಣ್‌ವೀರ್ ಸಿಂಗ್ ನಟನೆಯ ‘ಧುರಂಧರ್ 2’ಗೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಕಿಕ್ ಸ್ಟಾರ್ ಸಿಕ್ಕಿದೆ.

ಮೊದಲ ಭಾರತದಲ್ಲಿ ಕಲೆಕ್ಷನ್ 102.55 ಕೋಟಿ ರೂಪಾಯಿ. ಹಾಗೇ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಕಲೆಕ್ಷನ್ ಆಗಿದ್ದು 43 ಕೋಟಿ ರೂಪಾಯಿ. ಎರಡನ್ನೂ ಸೇರಿಸಿದರೆ, ಮೊದಲ ದಿನ 145.55 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಹಾಗೇ ಮಿಂಟ್ ವರದಿಯಲ್ಲಿ ‘ಧುರಂಧರ್ 2’ ಮೊದಲ ದಿನದ ಗ್ರಾಸ್ ಲೆಕ್ಷನ್ 172.63 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗಿದೆ.