ಮುಂಬೈ: ಬಾಲಿವುಡ್ನಲ್ಲಿ ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ತಾರೆಯರು ನಟಿಸಲಿರುವ ರಾಮಾಯಣ ಸಿನಿಮಾ ನಿರ್ಮಾಣಗೊಳ್ಳುವ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇದೆ.
ಜನಪ್ರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಎಲ್ಲ ನಟ-ನಟಿಯರ ಲುಕ್ ಟೆಸ್ಟ್, ಧ್ವನಿ ಪರೀಕ್ಷೆ ಇನ್ನಿತರೆಗಳು ಮುಗಿದಿದೆ ಎನ್ನಲಾಗಿದೆ. ಇದೀಗ ಸಿನಿಮಾದ ಮುಹೂರ್ತಕ್ಕೆ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ.
ಏಪ್ರಿಲ್ 17ರಂದು ಸಿನಿಮಾದ ಮುಹೂರ್ತವನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಲಿದೆ. ಘೋಷಣೆಗೆ ಏಪ್ರಿಲ್ 17ನ್ನೇ ಆಯ್ದುಕೊಳ್ಳಲು ಕಾರಣವೂ ಇದೆ. ಅಂದು ರಾಮನವಮಿ. ಹಾಗಾಗಿ ಅದೇ ದಿನದಂದು ಚಿತ್ರತಂಡ ಸಿನಿಮಾದ ಮುಹೂರ್ತ ಮಾಡಲಿದೆ. ಸಿನಿಮಾದ ಹೆಸರು ಸಹ ಅದೇ ದಿನ ಘೋಷಣೆ ಆಗಲಿದೆ.
ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ. ಕನ್ನಡದ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಅವರುಗಳು ಕೈಕೆ, ಊರ್ಮಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ.