ಮುಂಬೈ: ಆಸ್ಕರ್ ವಿಜೇತ ಚಲನಚಿತ್ರ ನಿರ್ಮಾಪಕರಾದ ಗುಣೀತ್ ಮೊಂಗಾ ಶುಕ್ರವಾರ ಮುಂಜಾನೆ ಮುಂಬೈ ವಿಮಾನ ನಿಲ್ದಾಣ ಮೂಲಕ ಸ್ವದೇಶಕ್ಕೆ ಮರಳಿದರು.
ಆಸ್ಕರ್-ವಿಜೇತ ಸಾಕ್ಷ್ಯಚಿತ್ರ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ನ ಕಾರ್ಯನಿರ್ವಾಹಕ ನಿರ್ಮಾಪಕರು ಮುಂಬೈ ನಿಲ್ದಾಣಕ್ಕೆ ಆಗಮಿಸಿದ ವೇಳೆ ಜನರು ಹರ್ಷೋದ್ಗಾರ ಮಾಡಿದರು. ಲಾಸ್ ಏಂಜಲೀಸ್ನಿಂದ ಸುದೀರ್ಘ ಹಾರಾಟದಿಂದ ದಣಿದಿದ್ದರೂ ಮಾಧ್ಯಮದವರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು.
ಕಳೆದ ವಾರ, “ದಿ ಎಲಿಫೆಂಟ್ ವಿಸ್ಪರರ್ಸ್” ಎಂಬ ಸಾಕ್ಷ್ಯಚಿತ್ರಕ್ಕಾಗಿ ಮೊಂಗಾ ಆಸ್ಕರ್ ಪ್ರಶಸ್ತಿ ಪಡೆದಿದ್ದರು.