ಮುಂಬೈ: ‘ಯೆಂಟಮ್ಮ’ ಹಾಡಿನ ಚಿತ್ರೀಕರಣದಲ್ಲಿ ಲುಂಗಿಯಲ್ಲಿ ಡ್ಯಾನ್ಸ್ ಮಾಡಿರುವುದು ಖುಷಿ ತಂದಿದೆ ಎಂದು ನಟಿ ಪೂಜಾ ಹೆಗ್ಡೆ ಹೇಳಿದ್ದಾರೆ. ಪೂಜಾ ಈ ಹಾಡಿನಲ್ಲಿ ಕೆಂಪು ಬಣ್ಣದ ಶರ್ಟ್ನಲ್ಲಿ ಮುಂಡು ಹಾಕಿಕೊಂಡು ಕುಣಿದಿದ್ದಾರೆ.
“ಸಲ್ಮಾನ್ ಖಾನ್, ರಾಮ್ ಚರಣ್ ಮತ್ತು ವೆಂಕಟೇಶ್ ದಗ್ಗುಬಾಟಿ ಜೊತೆಗಿನ ‘ಯೆಂಟಮ್ಮ’ ಚಿತ್ರೀಕರಣದ ಸಮಯದಲ್ಲಿ ನಾನು ರೋಮಾಂಚನಗೊಂಡಿದ್ದೇ. ಲುಂಗಿಯಲ್ಲಿ ನೃತ್ಯ ಮಾಡಿದ್ದು ಹಾಡಿನ ಚಿತ್ರೀಕರಣದ ಪ್ರಮುಖ ಅಂಶವಾಗಿದೆ. ಪ್ರತಿ ಮದುವೆ ಮತ್ತು ಪಾರ್ಟಿ ನೃತ್ಯಗಳಲ್ಲಿ ‘ಯೆಂಟಮ್ಮ’ ಒಂದಾಗಲಿದೆ ಎಂದು ಪೂಜಾ ಹೇಳಿದ್ದಾರೆ. ಚಿತ್ರವು ಏಪ್ರಿಲ್ 21 ರಂದು ಥಿಯೇಟರ್ಗಳಿಗೆ ಬರಲಿದೆ.