News Karnataka Kannada
Friday, May 03 2024
ಮನರಂಜನೆ

ಮುಂಬಯಿ: ಚುಂಬನ ಪ್ರಕರಣ, 16 ವರ್ಷದ ಬಳಿಕ ಶಿಲ್ಪಾ ಶೆಟ್ಟಿಗೆ ದೋಷಮುಕ್ತಿ

Shilpa Shetty's relationship
Photo Credit : Facebook

ಮುಂಬಯಿ: ಸಾರ್ವಜನಿಕ ವೇದಿಕೆಯಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ ಅವರನ್ನು ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ 16 ವರ್ಷದ ಬಳಿಕ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.

ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದು ಹೇಳಿ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ.

2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟ ರಿವರ್ಡ್‌ ಗೇರ್‌ ಅವರು ಶಿಲ್ಪಾ ಶೆಟ್ಟಿಯನ್ನು ಬರಸೆಳೆದು ಅಪ್ಪಿ ಹಿಡಿದು ಚುಂಬಿಸಿದ್ದರು. ಸಾವಿರಾರು ಜನರ ಎದುರು ನಟ ಮತ್ತು ನಟಿ ತೋರಿಸಿದ ಈ ವರ್ತನೆ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿ ಭಾರತೀಯ ಸಂಸ್ಕೃತಿಗೆ ಅಪಚಾರ ಎಸಗುವ ವರ್ತನೆ ವಿರುದ್ಧ ಕೇಸು ದಾಖಲಾಗಿತ್ತು. ಸುದೀರ್ಘ 15 ವರ್ಷ ವಿಚಾರಣೆ ನಡೆದು ಕಳೆದ ವರ್ಷ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಶಿಲ್ಪಾ ಶೆಟ್ಟಿಯನ್ನು ನಿರ್ದೋಷಿ ಎಂದು ಹೇಳಿತ್ತು. ಈ ತೀರ್ಪಿನ ವಿರುದ್ಧ ಸೆಷನ್ಸ್‌ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸೆಷನ್ಸ್‌ ಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು