News Karnataka Kannada
Sunday, May 12 2024
ಮನರಂಜನೆ

ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ವೇಳೆ ನಾಲ್ಕು ಬಾರಿ ಹೃದಯಾಘಾತ: ಮಾಡೆಲ್ ಸಾವು

Model dies of four heart attacks during cosmetic surgery
Photo Credit : News Kannada

ಬ್ರೆಜಿಲ್: ಹೀರೋಯಿನ್​ಗಳು ಮಾಡೆಲ್ ಗಳು ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಾರೆ. ಇಲ್ಲವಾದರೆ ಕಾಸ್ಮೆಟಿಕ್ ಮೇಕಪ್ ಗಳನ್ನು  ಬಳಸುತ್ತಾರೆ. ಮೇಕಪ್ ಮಾಡದೆ ಹೊರ ಜಗತ್ತಿಗೆ ಕಾಣಿಸಿಕೊಳ್ಳುವುದು ತೀರಾ ಕಡಿಮೆಯ ವಿಚಾರ. ಇನ್ನು ಕೆಲವರಂತು ತಮ್ಮ ಸೌಂದರ್ಯವನ್ನು ಇನ್ನು ಹೆಚ್ಚಿಸಿಕೊಳ್ಳಲು ಸರ್ಜರಿಗಳನ್ನು ಸಹ ಮಾಡಿಸಿಕೊಳ್ಳುತ್ತಾರೆ. ತುಟಿ ಕೆನ್ನೆ ಮೂಗಿಗೆ ಸರ್ಜರಿ ಮಾಡಿಸಿಕೊಂಡು ಅಂದಹಚ್ಚಿಸಿಕೊಳ್ಳುತ್ತಾರೆ.

ಇದೇ ರೀತಿಯ ಪ್ರಯತ್ನದಲ್ಲಿದ್ದ ಪ್ರಸಿದ್ಧ ಸೆಲೆಬ್ರಿಟಿಯೊಬ್ಬರು ಸಣ್ಣ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಬ್ರೆಜಿಲ್​​ನ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ವೇಳೆ ನಾಲ್ಕು ಬಾರಿ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.

ಬ್ರೆಜಿಲಿಯನ್ ಟಿವಿ ಶೋ ‘ಪವರ್ ಕಪಲ್ 6′ ನಿಂದ ಲುವಾನಾ ಜನಪ್ರಿಯತೆ ಪಡೆದಿದ್ದ ಅವರು ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ. ಅವರನ್ನು ವೈದ್ಯರು ತಕ್ಷಣ ಐಸಿಯು ವಾರ್ಡ್​ಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಲುವಾನಾ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.

ಲುವಾನಾ ಸಾವಿಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಲುವಾನಾ ಆಂಡ್ರೇಡ್ ಸಾವು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು