News Karnataka Kannada
Sunday, May 05 2024
ಆರೋಗ್ಯ

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ

How to maintain dental health
Photo Credit : Pixabay

ನಮ್ಮ ಮುಖದ ಸೌಂದರ್ಯ ಇಮ್ಮಡಿಗೊಳ್ಳುವುದು ನಮ್ಮ ಹಲ್ಲಿನಿಂದ ಎಂದರೂ ತಪ್ಪಾಗಲಾರದು. ನಮ್ಮ ಆರೋಗ್ಯಕ್ಕೆ ಆಹಾರ ಎಷ್ಟುಮುಖ್ಯವೋ ಆರೋಗ್ಯಕರ ಹಲ್ಲುಗಳು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ನಮ್ಮ ಹಲ್ಲುಗಳನ್ನು ಚನ್ನಾಗಿ ಕಾಪಾಡಿಕೊಂಡಷ್ಟು ನಮಗೆ ಉತ್ತಮ.

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಆಹಾರವನ್ನು ಉತ್ತಮವಾಗಿ ಜಗಿಯಲು ಸಹಾಯಕವಾಗಿದೆ. ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ, ಅನುರಾಧ ಹೇಳುತ್ತಾರೆ.

ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಸಲ ಆಹಾರ ಸೇವಿಸಿದ ನಂತರ ಬಾಯಿಯನ್ನು ಚನ್ನಾಗಿ ಮುಕ್ಕಳಿಸುವುದರಿಂದ ಬಾಯಲ್ಲಿ ಆಹಾರಗಳು ಸಿಕ್ಕಿಕೊಳ್ಳುವುದಿಲ್ಲ. ಆದಷ್ಟು ಆಹಾರದಲ್ಲಿ ಸಕ್ಕರೆಯ ಅಂಶವಿರುವ ಕೇಕ್, ಪೇಸ್ಟ್ರಿ ಜೂಸ್, ಹಾಗೂ ಕಾರ್ಬೋನೇಟೆಡ್ ಡ್ರಿಂಕ್ಸ್, ಹೆಚ್ಚು ಹುಳಿ ಹಾಗೂ ಉಪ್ಪು ಇರುವಂತಹ ಆಹಾರಗಳು ಹಲ್ಲಿನ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಏನು ಸಮಸ್ಯೆ ಇದ್ದರೂ ಇಲ್ಲದಿದ್ದರೂ ಆರು ತಿಂಗಳಿಗೊಮ್ಮೆ ವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಪರೀಕ್ಷೆ ಮಾಡಿಸಿಕೊಳ್ಳುವಂಥದ್ದು ಹಾಗು ಆರು ತಿಂಗಳಿಗೊಮ್ಮೆ ಹಲ್ಲನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸವುದು ಹಲ್ಲು ಹಾಗೂ ವಸಡಿನ ಸಮಸ್ಯೆಗಳನ್ನು ಬಗೆಹರಿಸಬಹುದು.

ಹಲ್ಲಿನ ಯಾವುದೇ ಸಮಸ್ಯೆ ಇಲ್ಲದಿದ್ದಲ್ಲಿ ತೆಂಗಿನ ಎಣ್ಣೆ ಬಳಸಿಕೊಂಡು ಬಾಯಿ ಮುಕ್ಕಳಿಸುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ. ಹಲ್ಲಿನ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದುಕೊಂಡು ಅದರಂತೆ ಮಾಡುವುದು ಒಳ್ಳೆಯದು.

ಆಹಾರ ಸೇವಿಸಿದ ನಂತರ ಹಲ್ಲಿನಲ್ಲಿ ಸಿಕ್ಕಿಕೊಂಡ ಆಹಾರದ ತುಣುಕುಗಳನ್ನು ತೆಗೆಯುವ ಸಲುವಾಗಿ ಹಲವು ಬಾರಿ ಟುತ್‌ಪಿಕ್ ಬಳಸಸುತ್ತೆವೆ. ಇದು ತುಂಬಾ ದೊಡ್ಡ ತಪ್ಪು ಟೂತ್‌ಪಿಕ್ ಬಳಸುವ ಬದಲು ಫ್ಲಾಸಿಂಗ್ ಮಾಡಿ ಹಲ್ಲನ್ನು ಸ್ವಚ್ಛಗೊಳಿಸಬಹುದು. ಇವುಗಳ ಜೊತೆಗೆ ರಾಗಿ ಜೋಳದಂತಹ ಆರೋಗ್ಯಕರ ಆಹಾರಗಳನ್ನು ಹೆಚ್ಚಾಗಿಸೇವಿಸುವುದು ನಮ್ಮ ಹಲ್ಲಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಬಹಳ ಉಪಯುಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು