ಮಂಗಳೂರು: ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದರು.
ದೇವಳದ ವತಿಯಿಂದ ಶಿಲ್ಪಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ದೇವರ ಶೇಷ ವಸ್ತ್ರ ನೀಡಲಾಯಿತು. ನಂತರ ಯಕ್ಷಗಾನ ವೀಕ್ಷಿಸಿದ ಶಿಲ್ಪಾಶೆಟ್ಟಿ ಯಕ್ಷಕಲೆಯ ಶ್ರೇಷ್ಠತೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶಿಲ್ಪಾ ಅವರ ಪತಿ ರಾಜ್ ಕುಂದ್ರಾ, ಸಹೋದರಿ ಶಮಿತಾ ಶೆಟ್ಟಿ ಕುಟುಂಬಸ್ಥರು ಇದ್ದರು. ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ ಇದ್ದರು.