ತ್ರಿಶೂರ್ : ಮಲಯಾಳಂ ಖ್ಯಾತ ನಟ ಮಮ್ಮೂಟಿ ತಮ್ಮ 70ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಈ ಸಂದರ್ಭದಲ್ಲಿ ಅವರ ಅಭಿಮಾನಿಯೊಬ್ಬರು ನೂರಾರು ಮೊಬೈಲ್ ಫೋನ್ ಮತ್ತು ಅದರ ಪರಿಕರಗಳಿಂದ 20 ಅಡಿ ಉದ್ದದ ಭಾವಚಿತ್ರವನ್ನು ರಚಿಸಿದ್ದಾರೆ.
ನಟನ ಭಾವಚಿತ್ರವನ್ನು ತ್ರಿಶೂರ್ ಕೆಬೀಸ್ ದರ್ಬಾರ್ ಕನ್ವೆನ್ಶನ್ ಸೆಂಟರ್ನಲ್ಲಿ ಇರಿಸಲಾಗಿದೆ. ಕಲಾವಿದ ಡಾವಿಂಚಿ ಸುರೇಶ್ ಅವರ ಪ್ರಕಾರ, ಭಾವಚಿತ್ರವು 20 ಅಡಿಗಳಷ್ಟು ಉದ್ದ ಇದ್ದು, ಇದನ್ನು 600 ಮೊಬೈಲ್ ಫೋನ್ಗಳು ಮತ್ತು 6,000 ಮೊಬೈಲ್ ಪರಿಕರಗಳನ್ನು ಬಳಸಿ ತಯಾರಿಸಲಾಗಿದೆ.
“ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ನಟ ಮಮ್ಮೂಟಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಭಾವಚಿತ್ರವನ್ನು ಮೊಬೈಲ್ ಅಂಗಡಿಯ ಮಾಲೀಕರಾದ ಅನಸ್ ಅವರು ನೀಡಿದ್ದಾರೆ.
.