News Karnataka Kannada
Sunday, April 28 2024
ಮನರಂಜನೆ

ಕಂಗನಾ ನಿಮ್ಮ ಚಿತ್ರಗಳನ್ನು ಥಿಯೇಟರ್​ನಲ್ಲಿ ಬಿಡುಗಡೆ ಮಾಡ್ಬೇಡಿ ಎಂದ ಕೆಆರ್​ಕೆ

Kangana shouldn't release your films in theatres: KRK
Photo Credit : Twitter

ಮುಂಬೈ: ನಟಿ ಕಂಗನಾ ರಣಾವತ್ ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಫ್ಲಾಪ್​ ಆಗುತ್ತಿವೆ. ಉತ್ತಮ ವಿಷಯವನ್ನು ಇಟ್ಟುಕೊಂಡು ಚಿತ್ರ ಮಾಡಿದರೂ ಅದ್ಯಾಕೋ ಯಶಸ್ಸೇ ಕಾಣಿಸುತ್ತಿಲ್ಲ.

ಇದೀಗ ಅವರ ಬಹು ನಿರೀಕ್ಷೆಯ ತೇಜಸ್​ ಚಿತ್ರಕ್ಕೂ ಇದೇ ಗತಿಯಾಗಿದೆ! ಇದೇ 27ರಂದು ಚಿತ್ರ ಬಿಡುಗಡೆಯಾದರೂ ಭಾರಿ ಫ್ಲಾಪ್ ಆದಂತಿದೆ. ಪ್ರೇಕ್ಷಕರ ಕೊರತೆಯಿಂದಾಗಿ ಭಾರತದಾದ್ಯಂತ 95 ಪ್ರತಿಶತ ಪ್ರದರ್ಶನಗಳನ್ನು (ಬೆಳಿಗ್ಗೆ 10:30 ಗಂಟೆಗೆ) ರದ್ದುಗೊಳಿಸಲಾಗಿದೆ. ತೇಜಸ್ ಮೊದಲ ದಿನವೇ ಅತ್ಯಂತ ಕಳಪೆ ಮುಂಗಡ ಬುಕ್ಕಿಂಗ್ ಪಡೆದಿದೆ.

ಇದೀಗ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಲ್‌ ಆರ್‌.ಖಾನ್‌ ಕಂಗನಾ ಮತ್ತು ಅವರ ತೇಜಸ್​ ಚಿತ್ರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಕಂಗನಾ ದೀದೀ ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮುಂದಿನ ಸಲ ನಿಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಬೇಡಿ. ಈ ಬಾಲಿವುಡ್‌ನವರು ನಿಮ್ಮನ್ನು ಬಿಡುವುದಿಲ್ಲ ಎಂದು ನಟಿಗೆ ಅಪಹಾಸ್ಯ ಮಾಡಿದ್ದಾರೆ. ಗದರ್‌, ಪಠಾಣ್‌, ಜವಾನ್‌ ಸಿನಿಮಾದ ಎಲ್ಲ ರೆಕಾರ್ಡ್‌ಗಳನ್ನು ತೇಜಸ್‌ ಸಿನಿಮಾ ಮುರಿಯಬೇಕಿತ್ತು. ಆದ್ರೆ ತೇಜಸ್​ ಸಿನಿಮಾ ಲೈಫ್‌ಟೈಮ್‌ ಗಳಿಕೆಯೇ 2 ಕೋಟಿಯಷ್ಟೇ ಎಂದು ತಮಾಷೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು