News Karnataka Kannada
Monday, April 29 2024
ವಿದೇಶ

36ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ನೀಲಿ ತಾರೆ: ಕಣ್ಣೀರಿಟ್ಟ ನೆಟ್ಟಿಗರು !

ಪ್ರಖ್ಯಾತ ನೀಲಿ ತಾರೆ ಕೆನಿ ಲಿನ್ ಕಾರ್ಟರ್ ಕೇವಲ 36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರವನ್ನು ಆಕೆಯ ಸ್ನೇಹಿತರು ಹಾಗೂ ಆಪ್ತವಲಯ ಖಚಿತಪಡಿಸಿದೆ.
Photo Credit : News Kannada

ಅಮೆರಿಕ: ಪ್ರಖ್ಯಾತ ನೀಲಿ ತಾರೆ ಕೆನಿ ಲಿನ್ ಕಾರ್ಟರ್ ಕೇವಲ 36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರವನ್ನು ಆಕೆಯ ಸ್ನೇಹಿತರು ಹಾಗೂ ಆಪ್ತವಲಯ ಖಚಿತಪಡಿಸಿದೆ.

ಯುನೈಟೆಡ್ ಸ್ಟೇಟ್ಸ್‌ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲೇ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಒಳ್ಳೆಯ ಕಾರ್ಯಕ್ಕಾಗಿ ಆಕೆಯ ಸ್ನೇಹಿತರ ಬಳಗ GoFundMe ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ. ಕೆನಿ ಲಿನ್ ಕಾರ್ಟರ್ ಸಾವಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

ಇನ್ನು ಅಪಾರ ಪ್ರತಿಭೆ ಹಾಗೂ ಸ್ವಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದ ಕೆನಿ ಲಿನ್ ಕಾರ್ಟರ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದೊಂದು ವರ್ಷದಿಂದ ಈ ಸಮಸ್ಯೆಯ ವಿರುದ್ದ ಹೋರಾಡುತ್ತಿದ್ದ ಅವರು ಕೊನೆಗೂ ಆತ್ಮಹತ್ಯೆ ಮಾಡಿಕೊಂಡಿದ್ದು ದುರಾದೃಷ್ಟಕರ ಎಂದು ಆಕೆಯ ಆಪ್ತವಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು