News Karnataka Kannada
Sunday, April 14 2024
Cricket
ಹೊರನಾಡ ಕನ್ನಡಿಗರು

ಲೋಕಸಭಾ ಚುನಾವಣೆಗೆ ದುಬೈ ಕನ್ನಡಿಗನ ಎಂಟ್ರಿ: ಯಾವ ಕ್ಷೇತ್ರದಿಂದ ಸ್ಪರ್ಧೆ ?

Shashidar
Photo Credit : News Kannada

ದುಬೈ: ದುಬೈನಲ್ಲಿ ಹೊರನಾಡು ಕನ್ನಡಿಗರಿಗೆ ಮಾತೃಭಾಷೆ ಕನ್ನಡ ಉಚಿತ ಪಾಠಶಾಲೆ ಆರಂಭಿಸುವ ಮೂಲಕ ಹೆಸರಾಗಿರು ಕನ್ನಡಿಗ ಶಶಿಧರ ನಾಗರಾಜಪ್ಪ ಅವರು, ಇದೀಗ ರಾಜಕೀಯ ಪ್ರವೇಶಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಆಕಾಂಕ್ಷಿಯಾಗಿದ್ದಾರೆ.ಇತ್ತಿಚೆಗೆ ಯುಎಇನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ರಾಮಮಂದಿರ ಉದ್ಘಾಟನೆಗೆ ಆಗಮಿಸಿದಾಗ ಅಲ್ಲಿನ ಕಾರ್ಯಕ್ರಮದ ಸಂಘಟಿಕರಲೊಬ್ಬರಾಗಿ ಸೇವೆ ಸಲ್ಲಿಸಿದ ಅವರು ಇದೀಗ ಸಂಪೂರ್ಣ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು, ಹಾವೇರಿ ಅಥಾವ ದಾವಣಗೆರೆ ಲೋಕಸಭಾ ಟಿಕೆಟ್‌ ಆಕಾಂಕ್ಷಿಯಾಗಿದ್ದು ಇದು ಭಾರತೀಯ ಜನತಾ ಪಕ್ಷದ ಗಮನ ಸೆಳೆದಿದೆ.

ಮೂಲತ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಗ್ರಾಮದವರಾರದ ಇವರು,ಕಳೆದ 2002ರಿಂದ ದುಬೈನಲ್ಲಿ ವಾಸವಾಗಿದ್ದಾರೆ.ಅಲ್ಲಿ ದೇವೂ ಇಲೆಕ್ಟ್ರಾನಿಕ್‌ನಲ್ಲಿ ಉಪ ಪ್ರಬಂಧಕರಾಗಿ ಕಾರ್ಯನಿರ್ವಹಿಸುತಿದ್ದಾರೆ. “ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು” ಎಂಬ ಕವಿವಾಣಿಯಂತೆ ತವರಿಂದ ದೂರವಾಗಿ ಅರಬ್‌ ಸಂಸ್ಥಾನದಲ್ಲಿ ನೆಲೆಸಿದ್ದರೂ,ಇವರ ಮನ ಎಂದಿಗೂ ಕನ್ನಡತನ ತುಡಿಯುತ್ತಿದೆ.ಆದ್ದರಿಂದ ಹೊರನಾಡಿನಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡದಿಂದ ದೂರ ಅಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಕನ್ನಡ ಅಕ್ಷರಾಭ್ಯಾಸ ನೀಡಿ ಹೊರದೇಶದಲ್ಲಿದ್ದರೂ ಕನ್ನಡ ಸಾಕ್ಷರತೆ ಉಳಿಸಲು ಉಚಿತ ಕನ್ನಡ ಪಾಠಶಾಲೆಗಳನ್ನು ಆರಂಭಿಸಿದ್ದಾರೆ.

ಈ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಅವರು ದುಬೈ ಕನ್ನಡ ಸ್ಮಾರ್ಟಕ್ಲಾಸ್‌ಗಳನ್ನು ಆರಂಭಿಸಲು ಅಂದಿನ ಕರ್ನಾಟಕ ಶಿಕ್ಷಣ ಸಚಿವ ನಾಗೇಶ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರನ್ನು ಕರೆಸಿ ಶಾಲೆಯನ್ನು ಉದ್ಘಾಟಿಸಲಾಗಿತ್ತು.

ದುಬೈನಲ್ಲಿ ಕನ್ನಡಿಗರ ಸಂಘಟನೆ ಮತ್ತು ಚಟುವಟಿಕೆಗಳನ್ನು ನಡೆಸಲು ದುಬೈ ಕನ್ನಡಿಗರ ಸಂಘಟನೆ ರಚಿಸಿ,ಈ ಮೂಲಕ ಕನ್ನಡಿಗರೆಲ್ಲಾ ಒಂದೆಡೆ ಸೇರುವಂತೆ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ಭಾಷ ಸಂಸ್ಕೃತಿಯನ್ನು ಜೀವಂತ ಉಳಿಯುವಂತೆ ಮಾಡಿದ್ದಾರೆ.
ಈಗಾಗಲೇ ಕಳೆದ 21 ವರ್ಷಗಳಿಂದ ದುಬೈನಲ್ಲಿದ್ದು ತಮ್ಮ ಸೇವೆಯೊಂದಿಗೆ ಸಮಾಜ ಸೇವೆ,ಕನ್ನಡಿಗರ ಸೇವೆ,ಧಾರ್ಮಿಕ ಹಾಗೂ ಸಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಇವರು ಇದೀಗ ರಾಜಕೀಯ ಸೇರುವ ಮೂಲಕ ಪೂರ್ಣಪ್ರಮಾಣದಲ್ಲಿ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

ಈ ಹಿನ್ನೆಲೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಹಾವೇರಿ ಅಥವಾ ದಾವಣಗೆರೆ ಸ್ಪರ್ಧಿಸಿ ನಿಸ್ವಾರ್ಥತೆಯಿಂದ ʻನಸೇವೆ ಜನಾರ್ಧಾನ ಸೇವೆʼ ಎಂದು ಸಂಪೂರ್ಣವಾಗಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ.

ಈಗಾಗಲೇ ಪಕ್ಷದ ವರಿಷ್ಠರ ಗಮನ ಸೆಳೆದಿರುವ ಅವರು,ಹಿಂದಿನಿಂದಲೂ ಪರೋಕ್ಷವಾಗಿ ಪಕ್ಷದವರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಪಕ್ಷದ ಸೇವೆ ಮಾಡುತ್ತ ಗಮನ ಸೆಳೆದಿದ್ದ ಅವರು,ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಪ್ರವೇಶಿಸ ಬಯಸಿ, ಹಾವೇರಿ ಅಥಾವ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು