News Karnataka Kannada
Monday, May 13 2024
ಮನರಂಜನೆ

ತ್ರಿಶಾ ಅವರೊಂದಿಗೆ ಬೆಡ್‌ ರೂಮ್‌ ಸೀನ್ ಇರುತ್ತದೆ ಅನ್ಕೊಂಡಿದ್ದೆ ಎಂದ ಸಿನಿಮಾ ನಟ ಯಾರು

I thought there would be a bedroom scene with Trisha, says the actor
Photo Credit : News Kannada

ಚೆನ್ನೈ: ಲೋಕೇಶ್‌ ಕನಕರಾಜ್‌ ಅವರ ʼಲಿಯೋʼ ಸಿನಿಮಾ ಬಿಗ್‌ ಹಿಟ್‌ ಆಗಿದೆ. ದಳಪತಿ ವಿಜಯ್‌ ಹಾಗೂ ತ್ರಿಶಾ ಪ್ರಧಾನ ಪಾತ್ರದ ಸಿನಿಮಾದಲ್ಲಿ ಹಿರಿಯ ನಟ ಮನ್ಸೂರ್ ಅಲಿ ಖಾನ್ ಕೂಡ ನಟಿಸಿದ್ದಾರೆ. ಆದರೆ ಅವರ ಪಾತ್ರ ಸಿನಿಮಾದ ನಾಯಕಿ ತ್ರಿಶಾ ಅವರೊಂದಿಗೆ ಇಲ್ಲ. ಈ ಬಗ್ಗೆ ಇತ್ತೀಚೆಗೆ ನಟ ಮನ್ಸೂರ್‌ ಅಲಿ ಖಾನ್ ಮಾತನಾಡಿರುವ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಒಳಗಾಗಿದ್ದಾರೆ.

ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್‌ ರೂಮ್‌ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್‌ ರೂಮ್‌ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್‌ ಸೀನ್‌ ಗಳನ್ನು ಮಾಡಿದ್ದೇನೆ.

ಇದೇನು ನನಗೆ ಹೊಸತಲ್ಲ. ಆದರೆ ಚಿತ್ರತಂಡ ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್‌ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದಾರೆ. ಮನ್ಸೂರ್‌ ಅವರು ಈ ರೀತಿಯ ಅಸಭ್ಯ ಹೇಳಿಕೆ ನೀಡಿದ ಕುರಿತು ಗರಂ ಆಗಿಯೇ ನಟಿ ತ್ರಿಶಾ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ.

ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿ ಲೈಂಗಿಕತೆ ಹಾಗೂ ಅಗೌರವದ ದೃಷ್ಟಿಕೋನದಲ್ಲಿ ಅವರು ಮಾತನಾಡಿದ್ದಾರೆ. ಅವರು ಮನಸ್ಸಿನಲ್ಲಿ ಯೋಚನೆ ಮಾಡುತ್ತಲೇ ಇರಲಿ. ಇಂಥ ವ್ಯಕ್ತಿಯೊಂದಿಗೆ ನಾನು ಜೀವನಮಾನವಿಡೀ ತೆರೆ ಹಂಚಿಕೊಳ್ಳುವುದಿಲ್ಲ.ಇಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ” ಎಂದು ನಟಿ ತ್ರಿಶಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು