News Karnataka Kannada
Saturday, April 20 2024
Cricket
ಮನರಂಜನೆ

ಚುನಾವಣೆಯಲ್ಲಿ ನಿಲ್ಲುವ ನಿರ್ಧಾರ ಮಾಡಿಲ್ಲ: ಡಾಲಿ ಧನಂಜಯ್

ಲೋಕಸಭಾ  ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದ್ದು, ಈ ಬಗ್ಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Photo Credit : News Kannada

ಬೆಂಗಳೂರು:  ಲೋಕಸಭಾ  ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಧನಂಜಯ್ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದ್ದು, ಈ ಬಗ್ಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಫೋಟೋ’ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

‘ಕಲಾವಿದರಾದ ನಾವು ಎಮೋಷನಲ್​ ಆಗಿರುತ್ತೇವೆ. ಹಾಗಾಗಿ ಕೆಲವು ಬೆಳವಣಿಗೆಗಳಿಗೆ ರಿಯಾಕ್ಟ್​ ಮಾಡಿರುತ್ತೇವೆ. ರಾಜಕಾರಣ ಬೇರೆ, ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದಂತಹ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ’ ಎಂದು ಡಾಲಿ ಹೇಳಿದ್ದಾರೆ.

ಒಂದು ವೇಳೆ ಆಫರ್​ ಬಂದರೆ ರಾಜಕೀಯಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ‘ಖಂಡಿತಾ ಇಲ್ಲ’ ಎಂದು ಅವರು ಉತ್ತರಿಸಿದ್ದಾರೆ.

‘ನೀವು ಗಮನಿಸಿರಬಹುದು. ಬೇರೆ ಅಭ್ಯರ್ಥಿಗಳ ಪರವಾಗಿ ನಾನು ಚುನಾವಣಾ ಪ್ರಚಾರಗಳಿಗೆ ಹೋಗಿಲ್ಲ. ಯಾರೂ ಕರೆದಿಲ್ಲ ಅಂತೇನೂ ಇಲ್ಲ. ನನಗೂ ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಕರೆದಿದ್ದರೂ ಕೂಡ ನಾನು ಎಲೆಕ್ಷನ್​ ಪ್ರಚಾರಕ್ಕೆ ಹೋಗಿಲ್ಲ. ಯಾಕೆಂದರೆ, ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ. ನಾನು ಕಾಮನ್​ ಮ್ಯಾನ್​ ಆಗಿ ಇರಲು ಇಷ್ಟಪಡುತ್ತೇನೆ ಡಾಲಿ ಹೇಳಿದ್ದಾರೆ.

‘ರಾಜಕಾರಣ ನನಗೆ ಗೊತ್ತಿಲ್ಲ. ಸಮಾಜದಲ್ಲಿ ಕೆಳಗೆ ಇರುವ ಜನರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡುವವನೇ ಒಳ್ಳೆಯ ನಾಯಕ. ಅವರು ಯಾವ ಪಕ್ಷದಲ್ಲಾದರೂ ಇರಲಿ. ಅವರಿಗೆ ಸ್ಪಂದಿಸುವವರೆಲ್ಲ ಒಳ್ಳೆಯ ಪ್ರಜೆಗಳು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಲಿಡ್ಕರ್​ ಉತ್ಪನ್ನಗಳಿಗೆ ಧನಂಜಯ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗೆ ಬಜೆಟ್​ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಡಾಲಿ ಬರೆದ ಸಾಲುಗಳನ್ನು ಓದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಧನಂಜಯ್​ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರಲು ಆರಂಭಿಸಿದೆ. ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್​ಗಳಿಗೆ ಅವರು ಉತ್ತರ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು