News Karnataka Kannada
Saturday, May 11 2024
ಮನರಂಜನೆ

‘ಹನುಮಾನ್’ ಬ್ಲಾಕ್​ಬಸ್ಟರ್​ ಪಕ್ಕಾ ಎಂದ ಅಭಿಮಾನಿಗಳು

ಭಾರತದಲ್ಲಿ ಸೂಪರ್ ಹೀರೋ ರೀತಿಯ ಕಾನ್ಸೆಪ್ಟ್ ಚಿತ್ರಗಳು ಕಡಿಮೆ. ಈಗ ತೇಜ ಸಜ್ಜಾ ಅವರು ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿದ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇಂದು (ಜ.12) ರಿಲೀಸ್ ಆಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Photo Credit : News Kannada

ಚೆನ್ನೈ: ಭಾರತದಲ್ಲಿ ಸೂಪರ್ ಹೀರೋ ರೀತಿಯ ಕಾನ್ಸೆಪ್ಟ್ ಚಿತ್ರಗಳು ಕಡಿಮೆ. ಈಗ ತೇಜ ಸಜ್ಜಾ ಅವರು ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿದ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇಂದು (ಜ.12) ರಿಲೀಸ್ ಆಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಎಫ್​ಎಕ್ಸ್ ಹಾಗೂ ಚಿತ್ರದ ಕ್ಲೈಮ್ಯಾಕ್ಸ್​ನ ಜನರು ಇಷ್ಟಪಟ್ಟಿದ್ದಾರೆ. ತೇಜ ಸಜ್ಜಾ ಅವರ ನಟನೆಯನ್ನು ಕೂಡ ಜನರು ಹೊಗಳಿದ್ದಾರೆ. ಹೀಗಾಗಿ ಮೊದಲ ದಿನ ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

https://twitter.com/i/status/1745518227873239365

 

‘ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ, ವರಲಕ್ಷ್ಮೀ ಶರತ್​ಕುಮಾರ್, ಅಮೃತಾ ಅಯ್ಯರ್, ವಿನಯ್ ರಾಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ವರ್ಮ ನಿರ್ದೇಶನ ಮಾಡಿದ್ದಾರೆ. ಇದು ಸೂಪರ್ ಹೀರೋ ಚಿತ್ರ ಎಂದು ತಂಡ ಹೇಳಿಕೊಂಡಿದೆ. ಹನುಮನಂತನ ಆಶೀರ್ವಾದ ಇರುವ ಕಥಾ ನಾಯಕನ ಹೋರಾಟದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

‘ಮೊದಲಾರ್ಧ ಉತ್ತಮವಾಗಿದೆ. ಸಿನಿಮಾ ಅನುಭವ ಬೇರೆಯದೇ ಲೆವೆಲ್​ನಲ್ಲಿ ಸಿಗುತ್ತದೆ. ವಿಎಫ್​ಎಕ್ಸ್, ಬಿಜಿಎಂ ಗೂಸ್​ಬಂಪ್ಸ್ ಸಿಗುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ವರ್ಷದ ಸಿನಿಮಾ. ಈ ಚಿತ್ರವನ್ನು ಇಷ್ಟಪಟ್ಟೆ. ಕ್ಲೈಮ್ಯಾಕ್ಸ್ ನಿಮ್ಮನ್ನು ಕಾಡುತ್ತದೆ. ಲವ್​ ಯೂ ಹನುಮಾನ್’ ಎಂದು ಕೆಲವರು ಬರೆದುಕೊಂಡಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು