News Karnataka Kannada
Sunday, May 05 2024
ಮನರಂಜನೆ

‘ಬಿಗ್​ ಬಾಸ್​ʼನಿಂದ ಹೊರಬಂದಿದಕ್ಕೆ ಕಾರಣ ತಿಳಿಸಿದ ಗೌರೀಶ್​ ಅಕ್ಕಿ

Gourish Akki reveals the reason behind his exit from Bigg Boss
Photo Credit : Facebook

ಬೆಂಗಳೂರು: ಎರಡನೇ ವಾರದಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮದಿಂದ ಗೌರೀಶ್ ಅಕ್ಕಿ ಅವರು ಹೊರ ಬಂದಿದ್ದಾರೆ. ಮೊದಲು ತಾನು 100 ದಿನ ಬಿಗ್‌ ಬಾಸ್‌ ಮನೆಯಲ್ಲಿಯೇ ಉಳಿಯಲು ಬಯಸುತ್ತೇನೆ ಎಂದಿದ್ದ ಅಕ್ಕಿ ಅವರು, ಬಳಿಕ 2ನೇ ವಾರದಲ್ಲಿ ತಾನು ಹೊರ ಬಂದಿದ್ದ ಕಾರಣ ತಿಳಿಸಿದ್ದಾರೆ.

“ಬಿಗ್‌ ಬಾಸ್‌ ಮನೆಯಲ್ಲಿ ನನಗೆ ಸ್ವಲ್ಪ ಅನ್​ಕಂಫರ್ಟಬಲ್​ ಅನಿಸಿತು. ಪ್ರತಿದಿನ ನನ್ನ ಜೀವನದಲ್ಲಿ ಸಾಕಷ್ಟು ಚಟುವಟಿಕೆ ನಡೆಯುತ್ತಿರುತ್ತವೆ. ನನ್ನಂಥವರನ್ನು ಒಂದು ದ್ವೀಪದಲ್ಲಿ ಇಟ್ಟರೆ ಮನಸ್ಸು ಮುದುಡುತ್ತದೆ. ಹಾಗಾಗಿ ಇದೇ ವಾರ ನನ್ನನ್ನು ಹೊರಗೆ ಕಳಿಸಿ ಎಂದು ನಾನು ಬಿಗ್​ ಬಾಸ್​ ಬಳಿ ಕೇಳಿಕೊಂಡಿದ್ದೆ. ಅದಕ್ಕೆ ತಕ್ಕಂತೆ ಆಯಿತು. ಬಿಗ್​ ಬಾಸ್​ ಮನೆಯಲ್ಲಿ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತದೆ. ಹಾಗಾಗಿ ಅಲ್ಲಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಅದಕ್ಕೆ ಕೆಲವರು ಹೊಂದಿಕೊಳ್ಳುತ್ತಾರೆ. ನಾನು ಗೆಲ್ಲಲು ಹೋಗಿರಲಿಲ್ಲ. ಒಂದು ಅನುಭವಕ್ಕಾಗಿ ಹೋಗಿದ್ದೆ” ಎಂದು ಗೌರೀಶ್​ ಅಕ್ಕಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4.5 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು