News Karnataka Kannada
Friday, May 17 2024
ಮನರಂಜನೆ

ಮೊದಲ ದಿನ ಕೇವಲ 5.75 ಕೋಟಿ ರೂ ಗಳಿಕೆ ಮಾಡಿದ ‘ಫ್ಯಾಮಿಲಿ ಸ್ಟಾರ್’

ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎನ್ನುವ ಮಾತು ಕೇಳಿಬಂದಿದೆ.
Photo Credit : NewsKarnataka

ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎನ್ನುವ ಮಾತು ಕೇಳಿಬಂದಿದೆ.

ಈ ಸಿನಿಮಾ ಮೊದಲ ದಿನ ಕೇವಲ 5.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಹೆಚ್ಚಿದರೆ ಮಾತ್ರ ನಿರ್ಮಾಪಕರು ಲಾಭ ಕಾಣಲಿದ್ದಾರೆ.

ವಿಜಯ್ ದೇವರಕೊಂಡ ಅವರ ಮ್ಯಾನರಿಸಂ ಪ್ರತೀ ಸಿನಿಮಾದಲ್ಲೂ ಒಂದೇ ರೀತಿ ಇದೆ ಎನ್ನುವ ಭಾವನೆ ಅಭಿಮಾನಿಗಳಿಗೆ ಕಾಡುತ್ತಿದೆ. ಅವರ ಡೈಲಾಗ್ ಡೆಲಿವರಿ ಕೂಡ ಒಂದೇ ರೀತಿ ಇದೆ. ಈ ಕಾರಣಕ್ಕೆ ಕೆಲವರಿಗೆ ಅವರ ಸಿನಿಮಾ ಇಷ್ಟ ಆಗುತ್ತಿಲ್ಲ.

ಬುಕ್ ಮೈ ಶೋನಲ್ಲಿ ‘ಫ್ಯಾಮಿಲಿ ಸ್ಟಾರ್’ ಸಿನಿಮಾ 7.3 ರೇಟಿಂಗ್ ಪಡೆದಿದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗೋ ಸಾಧ್ಯತೆ ಇದೆ.

‘ಫ್ಯಾಮಿಲಿ ಸ್ಟಾರ್’ ನೋಡಿ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸಿದ್ದರು. ಸಿನಿಮಾ ಚೆನ್ನಾಗಿಲ್ಲ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದರು.

ವಿಜಯ್ ದೇವರಕೊಂಡ ಅವರಿಗೆ ಟಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ರಿಲೀಸ್ ಆದ ‘ಗೀತ ಗೋವಿಂದಂ’ ಕೂಡ ಯಶಸ್ಸು ಕಂಡಿತ್ತು. ಇದಾದ ಬಳಿಕ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಕಳೆದ ವರ್ಷ ರಿಲೀಸ್ ಆದ ಸಿನಿಮಾ ‘ಖುಷಿ’ ಗೆದ್ದಿದೆಯಾದರೂ ದೊಡ್ಡ ಹಿಟ್ ಎಂದೇನು ಅನಿಸಿಕೊಂಡಿಲ್ಲ. ಈಗ ‘ಫ್ಯಾಮಿಲಿ ಸ್ಟಾರ್’ ಕೂಡ ಸಾಮಾನ್ಯ ಹಿಟ್ ಎನಿಸಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು