News Karnataka Kannada
Friday, May 03 2024
ಮನರಂಜನೆ

12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಇಶಾ ಡಿಯೋಲ್‌

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಹಾಗೂ ನಟಿ ಹೇಮಾಮಾಲಿನಿ ಅವರ ಪುತ್ರಿ ಇಶಾ ಡಿಯೋಲ್‌ ತಮ್ಮ ವಿಚ್ಛೇದನವನ್ನು ದೃಢಪಡಿಸಿದ್ದಾರೆ. 42 ವರ್ಷದ ಇಶಾ ಡಿಯೋಲ್‌ 2012ರಲ್ಲಿ ಭರತ್‌ ಥಕ್ತಾನಿಯನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ 12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.
Photo Credit : News Kannada

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಹಾಗೂ ನಟಿ ಹೇಮಾಮಾಲಿನಿ ಅವರ ಪುತ್ರಿ ಇಶಾ ಡಿಯೋಲ್‌ ತಮ್ಮ ವಿಚ್ಛೇದನವನ್ನು ದೃಢಪಡಿಸಿದ್ದಾರೆ. 42 ವರ್ಷದ ಇಶಾ ಡಿಯೋಲ್‌ 2012ರಲ್ಲಿ ಭರತ್‌ ಥಕ್ತಾನಿಯನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ 12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

ಮಂಗಳವಾರ ಇಬ್ಬರೂ ಕೂಡ ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ನಾವಿಬ್ಬರೂ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮಿಬ್ಬರ ಜೀವನದಲ್ಲಿ ಇದು ಪ್ರಮುಖ ಬದಲಾವಣೆ ಎನ್ನುವುದು ಗೊತ್ತಿದೆ. ಆದರೆ, ಇಬ್ಬರು ಮಕ್ಕಳ ಹಿತಾಸಕ್ತಿ ಹಾಗೂ ಅವರಿಗೆ ಒಳ್ಳೆಯದು ಎನ್ನುವ ನಿರ್ಧಾರ ನಮಗೆ ಬಹಳ ಪ್ರಮುಖವಾಗಿದೆ ಎಂದು ಇಶಾ ಡಿಯೋಲ್‌ ಹಾಗೂ ಭರತ್‌ ತಿಳಿಸಿದ್ದಾರೆ.

ನಮ್ಮಿಬ್ಬರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು ಎಂದು ಇಬ್ಬರೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಡೆಲ್ಲಿ ಟೈಮ್ಸ್‌ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು