ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಅವರು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿ ತುಲ್ಸಿಯಾನಿ ಗ್ರೂಪ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಸಂಸ್ಥೆಯು ಹೂಡಿಕೆದಾರರು ಮತ್ತು ಬ್ಯಾಂಕ್ಗಳಿಗೆ ಸುಮಾರು 30 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಈ 30 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಗೌರಿ ಖಾನ್ ಕೂಡ ತನಿಖೆಗೆ ಒಳಪಡಲಿದ್ದಾರೆ. ಈ ಬಗ್ಗೆ ಸದ್ಯಕ್ಕೆ ಗೌರಿ ಖಾನ್ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಇಡಿ ಅಧಿಕಾರಿಗಳು ಗೌರಿ ಖಾನ್ ಹಣಕಾಸು ವ್ಯವಹಾರ ಕುರಿತು ತನಿಖೆ ನಡೆಸಲು ಮುಂದಾಗಿದೆ. ತುಲ್ಸೈನಿ ಗ್ರೂಪ್ನಿಂದ ರಾಯಭಾರಿ ಆಗಲು ಪಡೆದಿರುವ ಸಂಭಾವನೆ, ಪಾಲುದಾರಿಕೆ ಕುರಿತು ಇಡಿ ತನಿಖೆ ನಡೆಸಲಿದೆ.
2023ರ ಮಾರ್ಚ್ ತಿಂಗಳಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಕುರಿತು ಈಗಾಗಲೇ ತುಲ್ಸೈನಿ ಗ್ರೂಪ್ ನಿರ್ದೇಶಕರ ವಿಚಾರಣೆ ನಡೆಸಿದ ಇಡಿ, ಇದೀಗ ಗೌರಿ ಖಾನ್ ವಿಚಾರಣೆಗೆ ಮುಂದಾಗಿದೆ.