ಮುಂಬೈ: ನ್ಯೂಮೋನಿಯಾದಿಂದ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ನಟ ನಾಸಿರುದ್ದೀನ್ ಶಾ ಚೇತರಿಸಿಕೊಂಡಿದ್ದಾರೆ. ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿರುವುದಾಗಿ ಅವರ ಪುತ್ರ, ನಟ ವಿವಾನ್ ಶಾ ಹೇಳಿದ್ದಾರೆ.
ಕಳೆದ ಮಂಗಳವಾರ ಪಿ ಡಿ ಹಿಂದುಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದ ಅವರು ಮನೆಗೆ ವಾಪಸ್ಸಾಗಿದ್ದಾರೆ.
‘ಬ್ಯಾಕ್ ಹೋಮ್’ ಅಡಿಬರಹವಿರುವ ತಮ್ಮ ತಂದೆ ಹಾಗೂ ತಾಯಿಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ನಟ ರತ್ನ ಪಠಾಕ್ ಶಾ ಹೇಳಿಕೊಂಡಿದ್ದಾರೆ. ನಾಸಿರುದ್ದೀನ್ ಶಾ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಜುಲೈ 3ರಂದು ಆಸ್ಪತ್ರೆ ಮೂಲಗಳು ಹೇಳಿದ್ದವು.
46 ವರ್ಷಗಳ ವೃತ್ತಿಜೀವನದಲ್ಲಿ ನಾಸಿರುದ್ದೀನ್ ಶಾ, ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಅಸಾಧಾರಣ ಕೊಡುಗೆ ನೀಡಿದ್ದಾರೆ.