Bengaluru 29°C
Ad

ಪವನ್ ಕಲ್ಯಾಣ್​​ಗೆ ಚಿರಂಜೀವಿ ಪತ್ನಿ ಕೊಟ್ರು ಭರ್ಜರಿ ಗಿಫ್ಟ್

Gift

ಇತ್ತೀಚೆಗೆ ಆಂಧ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ ಸ್ಟ್ರೈಕ್ ರೇಟ್ನೊಂದಿಗೆ ಭರ್ಜರಿ ಜಯ ಸಾಧಿಸಿದೆ. ಪಿಠಾಪುರದಿಂದ ಸ್ಪರ್ಧಿಸಿದ್ದ ಜನಸೇನಾ ನಾಯಕ ಪವನ್ ಕಲ್ಯಾಣ್ ಹೊರತುಪಡಿಸಿ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದರೊಂದಿಗೆ ಪವನ್ ಕಲ್ಯಾಣ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳು ಸಿಕ್ಕಿವೆ. ಈ ಹಿನ್ನಲೆಯಲ್ಲಿ ಚಿರಂಜೀವಿ ಪತ್ನಿ ಸುರೇಖಾ ಪವನ್ ಕಲ್ಯಾಣ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಸಚಿವ ಪವನ್ ಕಲ್ಯಾಣ್ ಅತ್ತಿಗೆ ಸುರೇಖಾ ಮೈದುನನಿಗೆ ಅತ್ಯಂತ ದುಬಾರಿ ಮಾಂಟ್ ಬ್ಲಾಂಕ್ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಮೆಗಾಸ್ಟಾರ್ ಚಿರಂಜೀವಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಲ್ಯಾಣ್ ಬಾಬುಗೆ ಅತ್ತಿಗೆಯ ಉಡುಗೊರೆ! ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭರ್ಜರಿ ಗೆಲುವಿನ ನಂತರ ಮೆಗಾ ಕುಟುಂಬದಲ್ಲಿ ಸಂಭ್ರಮ ಜೋರಾಗಿದೆ.

Ad
Ad
Nk Channel Final 21 09 2023
Ad