ಟಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದಿರುವ ಸಮಂತಾ ಸದ್ಯ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ಗೆ ಕಾಲಿಟ್ಟ ಬ್ಯೂಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು.
ತೆಲುಗಿನಲ್ಲಿ ನಟ ವಿಜಯ ದೇವರಕೊಂಡ ಜೊತೆ ಸಮಂತಾ ಖುಷಿ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಇದರ ಜೊತೆ ಬಾಲಿವುಡ್ ನಟ ವರುಣ್ ಧವನ್ ಜೊತೆ ಸಮಂತಾ ಸಿಟಾಡೆಲ್ ವೆಬ್ ಸೀರಿಸ್ ಸಹ ಮಾಡುತ್ತಿದ್ದಾರೆ. ಇದೀಗ ಈ ಸಮಂತಾ ಶಾರ್ಟ್ ಹೇರ್, ನ್ಯೂ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಸಮಂತಾ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಸಮಂತಾ ಇಂಡಸ್ಟ್ರಿಗೆ ಬಂದು 12 ವರ್ಷಗಳಾಗಿವೆ. ಮೊದಲ ಸಿನಿಮಾದಲ್ಲೇ ಸಕ್ಸಸ್ ಪಡೆದ ಸ್ಯಾಮ್ ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದಾರೆ. ಮೊದಲ ಸಿನಿಮಾ ಏ ಮಾಯಾ ಚೇಸಾವೇ ಚಿತ್ರಕ್ಕಾಗಿ ಸಮಂತಾಗೆ ಹಲವು ಪ್ರಶಸ್ತಿಗಳು ಪಡೆದಿದ್ದಾರೆ. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸಮಂತಾ ಸಾಕಷ್ಟು ಆಸ್ತಿಯನ್ನು ಮಾಡಿದ್ದಾರೆ.