News Karnataka Kannada
Sunday, April 28 2024
ಬಾಲಿವುಡ್

ರಾಜ್‌ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಕಳೆದುಕೊಂಡ ಆದಾಯ ಎಷ್ಟು ಗೊತ್ತಾ ?

Shilpa Shetty 23 7 21 .
Photo Credit :

ಮುಂಬೈ : ಕೆಲ ದಿನಗಳಿಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್‌ ಕುಂದ್ರಾ ಅವರು ನೀಲಿ ಚಿತ್ರಗಳ ತಯಾರಿಕೆ ಮತ್ತು ವಿತರಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮುಂಬೈ ಪೋಲೀಸರು ಬಂಧಿಸಿದ್ದರು. ಈ ಪ್ರಕರಣ ಇಡೀ ದೆಶಾದ್ಯಂತ ದೊಡ್ಡ ಸುದ್ದಿ ಆಗಿತ್ತು.
ಪತಿಯ ಬಂಧನದಿಂದ ಶಿಲ್ಪಾ ಶೆಟ್ಟಿ ಅವರ ಬದುಕಿನ ಮೇಲೂ ಸಾಕಷ್ಟು ಪರಿಣಾಮ ಆಗಿದೆ. ಅವರು ಸಾರ್ವಜನಿಕ ವಲಯದಲ್ಲಿ ಮುಜುಗರ ಎದುರಿಸಬೇಕಾಗಿ ಬಂದಿದ್ದಲ್ಲದೆ ಆದಾಯವನ್ನೂ ಕಳೆದುಕೊಂಡಿದ್ದಾರೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ. ಶಿಲ್ಪಾ ಶೆಟ್ಟಿ, ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಸೀಸನ್​​​ 4 ರ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಸದ್ಯ ತಮ್ಮ ಪತಿ ರಾಜ್​​ಕುಂದ್ರಾ ಅವರು ಸಂಕಷ್ಟದಲ್ಲಿರುವ ಕಾರಣ ಶಿಲ್ಪಾ ಶೆಟ್ಟಿಯವರ ದಿನಚರಿಯೆಲ್ಲವೂ ಅಸ್ತವ್ಯಸ್ತವಾಗಿದೆ. ನಟಿ ಶಿಲ್ಪಾ ಶೆಟ್ಟಿ ಕೆಲವು ದಿನಗಳ ಕಾಲ ರಿಯಾಲಿಟಿ ಶೋ ಕಾರ್ಯಕ್ರಮದ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಶಿಲ್ಪಾ ಶೆಟ್ಟಿ ಕಾರ್ಯಕ್ರಮಕ್ಕೆ ಗೈರುಹಾಜರಾದ ಕಾರಣ ಸುಮಾರು 2 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವನ್ನು ಎದುರಿಸಲಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್​ ನಟಿ, ಬಿಗ್​ಬಾಸ್​​ ಖ್ಯಾತಿ, ಬಹುಭಾಷಾ ತಾರೆ, ಉದ್ಯಮಿ ಪತ್ನಿ ಹೀಗೆ ಹೈ ಪ್ರೊಫೈಲ್ ಹೊಂದಿರುವ ಶಿಲ್ಪಾ ಶೆಟ್ಟಿ ಕಿರುತೆರೆಯ ಜನಪ್ರಿಯ ಡ್ಯಾನ್ಸ್​ ರಿಯಾಲಿಟಿ ಶೋ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತೀರ್ಪುಗಾರರಾಗಿದ್ದಾರೆ. ಪ್ರತಿ ಎಪಿಸೋಡ್​ಗೆ 18 ರಿಂದ 22 ಲಕ್ಷ ರೂ. ಸಂಭಾವನೆಯನ್ನು ಸ್ವೀಕರಿಸುವ ಶಿಲ್ಪಾ ಪ್ರತಿವಾರ ಎರಡು ಎಪಿಸೋಡ್​​ಗಳ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು.ಆದರೆ ಪತಿ ರಾಜ್​ ಕುಂದ್ರಾ ಅವರ ಅಶ್ಲೀಲ ಚಿತ್ರಗಳ ನಿರ್ಮಾಣದ ಪ್ರಕರಣವು ಪ್ರತಿನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಲ್ಲದೇ ಪ್ರತಿನಿತ್ಯ ಹಲವಾರು ವಿಷಯಗಳು ಬಹಿರಂಗಗೊಳ್ಳುತ್ತಿದೆ. ಈ ಎಲ್ಲಾ ಕಾರಣಗಳಿಂದ ಶಿಲ್ಪಾ ಶೆಟ್ಟಿ ಚಿತ್ರೀಕರಣದಿಂದ ದೂರ ಉಳಿದಿದ್ದಾರೆ. ಇನ್ನೂ ಈ ಪ್ರಕರಣವು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಚಿತ್ರೀಕರಣಕ್ಕೆ ಹಾಜರಾಗಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ನಿರೀಕ್ಷೆಗಳಿವೆ.
ಇನ್ನೂ ಶಿಲ್ಪಾಶೆಟ್ಟಿಯಿಂದ ಖಾಲಿ ಇರುವ ತೀರ್ಪುಗಾರರ ಸ್ಥಾನಕ್ಕೆ ಅವರ ಅನುಪಸ್ಥಿತಿಯಲ್ಲಿ ಕರೀಷ್ಮಾ ಕಪೂರ್​ ಅವರನ್ನು ಒಂದು ಸಂಚಿಕೆಗೆ ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿತ್ತು. ಮುಂದಿನ ಕೆಲವು ಸಂಚಿಕೆಗಳಲ್ಲಿ ತಾರಾ ಜೋಡಿ ನಟ ರಿತೇಶ್​ ದೇಶ್​ಮುಖ್ ಮತ್ತು ನಟಿ ಜೆನಿಲಿಯಾ ದೇಶ್​ಮುಖ್ ಅವರನ್ನು ತೀರ್ಪುಗಾರರಾಗಿ ಬರಮಾಡಿಕೊಳ್ಳಲಾಗಿದೆ. ಇನ್ನೂ ಶಿಲ್ಪಾ ಶೆಟ್ಟಿಯವರನ್ನು ಶಾಶ್ವತವಾಗಿ ಈ ಕಾರ್ಯಕ್ರಮದಿಂದ ಕೈ ಬಿಡಲು ವಾಹಿನಿ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕುಂದ್ರಾ ಪ್ರಕರಣ ಇನ್ನೊಂದು ತಿಂಗಳಲ್ಲಿ ಇತ್ಯರ್ಥವಾಗಲಿದ್ದು, ಶಿಲ್ಪಾ ಶೆಟ್ಟಿ ಈ ತಿಂಗಳಲ್ಲಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿದೆ.
ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ಚಿತ್ರೀಕರಣ ಮತ್ತು ಆ್ಯಪ್​​ನಲ್ಲಿ ಬಿಡುಗಡೆ ಮಾಡಿದ ಆರೋಪದಡಿ ಜುಲೈ 19 ರಂದು ಬಂಧಿಸಲಾಗಿತ್ತು. ನೀಲಿ ಚಿತ್ರಗಳನ್ನು ತಯಾರಿಸಿ ಹಾಟ್ ಶಾಟ್ಸ್ ಎಂಬ ಆ್ಯಪ್ ನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ರಾಜ್​ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದಾರೆಯೇ ಎಂದು ಮುಂಬೈ ಪೊಲೀಸ್ ಅಪರಾಧ ವಿಭಾಗವು ತನಿಖೆ ಮಾಡಿದೆ. ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಶಿಲ್ಪಾ ಅವರ ಭಾಗಿದಾರಿಕೆ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಮುಂಬೈ ಪೊಲೀಸರು ಕಳೆದ ವಾರ ಮಾಹಿತಿ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು