News Karnataka Kannada
Sunday, May 19 2024
ಬಾಲಿವುಡ್

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಜ.7ರಂದು ಬಿಡುಗಡೆಯಾಗಲ್ಲ!

Photo Credit :

ಮುಂಬೈ:  ಜ.7ರಂದು ತೆರೆ ಕಾಣಬೇಕಿದ್ದ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ  ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, “ಕೊರೊನಾ ಹೆಚ್ಚುತ್ತಿರುವುದರಿಂದಾಗಿ ಅನೇಕ ರಾಜ್ಯಗಳಲ್ಲಿ ಥಿಯೇಟರ್‌ಗಳಿಗೆ ನಿರ್ಬಂಧ ಹೇರಲಾಗಿದೆ. ಆ ಹಿನ್ನೆಲೆಯಲ್ಲಿ ನಾವು ಸಿನಿಮಾ ಬಿಡುಗಡೆಯನ್ನು ಮುಂದೂಡಲೇಬೇಕಾಯಿತು. ನಿಮ್ಮ ಕುತೂಹಲವನ್ನು ಇನ್ನಷ್ಟು ದಿನ ಕಾಪಿಟ್ಟುಕೊಳ್ಳಿ’ ಎಂದು ಬರೆದುಕೊಂಡಿದೆ.

ಆರ್‌ಆರ್‌ಆರ್‌ ಜೊತೆ ಸಂಘರ್ಷವಾಗುತ್ತದೆ ಎನ್ನುವ ಕಾರಣಕ್ಕೇ ಗಂಗೂ ಬಾಯಿ ಕಥಿಯಾವಾಡಿ, ಭೀಮ್ಲಾ ನಾಯಕದಂತಹ ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಆದರೆ ಇದೀಗ ಆರ್‌ಆರ್‌ಆರ್‌ ಬಿಡುಗಡೆಯೂ ಮುಂದೂ ಡಿರುವುದು ಅನೇಕರಿಗೆ ಅಘಾತ ತಂದಿದೆ.

ಕನ್ನಡ, ತಮಿಳು, ಮಲಯಾಳಂ,ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳು ತಮ್ಮ ಬಿಡುಗಡೆ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಿಸಬೇಕಾದ ಅನಿವಾರ್ಯತೆಗೆ ಬಿದ್ದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು