ಮಲಯಾಳಂ ಸಿನಿಮಾಗಳು ನಮ್ಮ ಮನೆಯ ಕಥೆಯಂತೆಯೇ ಇರುತ್ತದೆ. ಸಖತ್ ಕ್ಲಾಸಿಯಾಗಿರುವ ಈ ಸಿನಿಮಾಗಳು ಕಣ್ಣಿಗೆ ಹಬ್ಬ ಎಂದೇ ಹೇಳಬಹುದು. ಇಂಥದ್ದರಲ್ಲೇ ಒಂದು ಸುಂದರ ಚಿತ್ರ ಬಾಲಿವುಡ್ಗೆ ರಿಮೇಕ್ ಆಗುತ್ತಿದೆ.
ಮೊಬೈಲ್ನಲ್ಲಿ ಮುಳುಗಿದವರ ಮನೆ ಕಥೆ ‘ಹೋಮ್’ ಹಿಂದಿಗೆ ರಿಮೇಕ್ ಆಗುತ್ತಿದೆ. ಒಟಿಟಿಯಲ್ಲಿ ರಿಲೀಸ್ ಆದ ಹೋಮ್ ಸಿನಿಮಾ ಯಶಸ್ಸು ಕಂಡಿತ್ತು. ಈ ಹೃದಯಸ್ಪರ್ಶಿ ಕಥೆಗೆ ಬಾಲಿವುಡ್ ಫಿದಾ ಆಗಿದ್ದು, ಹಿಂದಿ ಪ್ರೇಕ್ಷಕರಿಗೂ ಈ ಸಿನಿಮಾ ನೋಡುವಂತಾಗಲಿ ಎಂದು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಅಬಂಡಂಟಿಯಾ ಎಂಟರ್ಟೇನ್ಮೆಂಟ್ ಸಂಸ್ಥೆ ಮೂಲಕ ಸಿನಿಮಾ ರಿಮೇಕ್ ಆಗಲಿದೆ.