ಬಾಲಿವುಡ್ :ಹೃತಿಕ್ ರೋಷನ್ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ವಿಚಾರ ಅಭಿಮಾನಿಗಳಿಗೆ ಶಾಕ್ ತಂದಿದೆ.ಹೌದು ತಾಯಿ ಪಿಂಕಿ ರೋಷನ್ ಜೊತೆ ಹೃತಿಕ್ ಬೆಳಗ್ಗಿನ ತಿಂಡಿ ಸೇವನೆ ಮಾಡಿದ್ದರು, ಆ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೃತಿಕ್ ಅಪಾರ್ಟ್ಮೆಂಟ್ ಬಾಲ್ಕನಿಯನ್ನು ಪಿಂಕಿ ನಿಂತಿದ್ದರೆ, ಹೃತಿಕ್ ಟೇಬಲ್ ಪಕ್ಕದ ಖುರ್ಚಿಯಲ್ಲಿ ಕೂತುಕೊಂಡು ಸೆಲ್ಫಿ ತೆಗೆದಿದ್ದರು. ಆ ವೇಳೆ ಗೋಡೆ ಒದ್ದೆ ಆಗಿರೋದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ.
ಅಭಿಮಾನಿಯೊಬ್ಬರು, “ಸರಿಯಾಗಿ ನೋಡಿ, ಗೋಡೆ ಒದ್ದೆ ಆಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಹೃತಿಕ್ ರೋಷನ್ ಕಾಮೆಂಟ್ ಮಾಡಿದ್ದು, “ಈಗ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದೇವೆ, ಶೀಘ್ರದಲ್ಲಿ ಹೊಸ ಮನೆ ಖರೀದಿ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ “ಪ್ಯಾಚ್ವರ್ಕ್ ಇಲ್ಲ ಅಂದರೆ ಗೋಡೆ ಕಟ್ಟುವ ಪ್ರಕ್ರಿಯೆಯನ್ನು ನಾವು ಎಂಜಾಯ್ ಮಾಡುವುದು ಹೇಗೆ?” ಎಂದು ಕೂಡ ಪ್ರಶ್ನೆ ಮಾಡಿದ್ದಾರೆ. ಮುಂಬೈನ ಜುಹುದಲ್ಲಿರುವ ಅಪಾರ್ಟ್ಮೆಂಟ್ಗೆ ಪ್ರತಿ ತಿಂಗಳು 8.2 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರಂತೆ. ಅಷ್ಟೇ ಅಲ್ಲದೆ ಕಳೆದ ಅಕ್ಟೋಬರ್ನಲ್ಲಿ ಹೃತಿಕ್ ಅವರು ಮುಂಬೈನಲ್ಲಿ 97.5 ಕೋಟಿ ರೂಪಾಯಿಯ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.ಮುಂಬೈನ ಜುಹುನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ `14, 15, 16ನೇ ಫ್ಲೋರ್ನಲ್ಲಿ ಹೃತಿಕ್ ಫ್ಲ್ಯಾಟ್ ಇದೆ. ಡುಪ್ಲೆಕ್ಸ್ಗೆ 67.5 ಕೋಟಿ ರೂಪಾಯಿ, 14ನೇ ಫ್ಲೋರ್ಗೆ 30 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿತ್ತು.
ನಟಿ ದೀಪಿಕಾ ಪಡುಕೋಣೆ ಜೊತೆಗೆ ಮೊದಲ ಬಾರಿಗೆ ಹೃತಿಕ್ ರೋಷನ್ ಅವರು ನಟಿಸಲಿದ್ದಾರೆ. ಆ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದೆ. ಇದು ಭಾರತದಲ್ಲೇ ಮೊದಲ ಏರಿಯಲ್ ಆ್ಯಕ್ಷನ್ ಸಿನಿಮಾವಾಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಈವರೆಗೂ ಭಾರತದಲ್ಲಿ ಬಂದಿರುವ ಆ್ಯಕ್ಷನ್ ಸಿನಿಮಾಗಳಲ್ಲೇ ಇದು ಬೇರೆ ಮಟ್ಟದಲ್ಲಿ ಇರಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಸಿದ್ಧಾರ್ಥ್ ಆನಂದ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಅತ್ಯುನ್ನತ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು, ವಿಶ್ವದ ವಿವಿಧ ಜಾಗಗಳಲ್ಲಿ ‘ಫೈಟರ್’ ಸಿನಿಮಾವನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ಸಿನಿಮಾವನ್ನು 2022ರ ಸೆ.30ರಂದು ರಿಲೀಸ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.