News Karnataka Kannada
Tuesday, April 30 2024
ಬಾಲಿವುಡ್

ನಾವು ಮತ್ತೆ ಭೇಟಿಯಾಗೋಣ: ಸಿದ್ಧಾರ್ಥ್ ನಿಧನಕ್ಕೆ ಗೆಳತಿ ಶೆಫಾಲಿ ಪತ್ರ

Shukla 03092021
Photo Credit :

ಮುಂಬೈ: ಬಿಗ್ ಬಾಸ್ ಹಿಂದಿ ಸೀಸನ್ 13ರ ವಿಜೇತ ಹಾಗೂ ಧಾರಾವಾಹಿ ನಟ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಬಾಲಿವುಡ್ ಮಂದಿ ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಬಿಗ್ ಬಾಸ್‌ನಲ್ಲಿ ಅವರ ಜತೆಗಿದ್ದ ಗೆಳತಿ ಶೆಫಾಲಿ ಜರಿವಾಲಾ, ಗೆಳೆಯನ ನೆನಪಿನಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ‘ನೀನು ಒಳ್ಳೆಯ ತಾಣದಲ್ಲಿ ಇದ್ದೀಯ, ಮುಂದೊಂದು ದಿನ ನಾವು ಮತ್ತೆ ಭೇಟಿಯಾಗೋಣ’ ಎಂದು ಒಡೆದ ಹೃದಯದ ಎಮೋಜಿ ಬಳಸಿ, ಸಿದ್ಧಾರ್ಥ ಅವರನ್ನು ಅಪ್ಪಿಕೊಂಡಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.

ಸಿದ್ಧಾರ್ಥ್ ಅವರ ನಿಧನದ ಸುದ್ದಿ ಕೇಳಿದ ಕೂಡಲೇ ಮುಂಬೈನ ಅವರ ಮನೆಗೆ ಶೆಫಾಲಿ ತೆರಳಿದ್ದರು. ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.

2019ರಲ್ಲಿ ಬಿಗ್ ಬಾಸ್ ಸೀಸನ್ ಹಿಂದಿ ಸೀಸನ್ 13ರಲ್ಲಿ ಶೆಫಾಲಿ ಮತ್ತು ಸಿದ್ಧಾರ್ಥ್ ಅವರ ಮಧ್ಯೆ ಗೆಳೆತನ ಉಂಟಾಗಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು