ನಟ ವಿಕ್ಕಿ ಕೌಶಲ್ ಹಾಗೂ ಕಟ್ರೀನ್ ಕೈಫ್ ಇಂದು ಅದ್ಧೂರಿಯಾಗಿ ಹಸೆಮಣೆ ಏರುತ್ತಿದ್ದಾರೆ. ಇಲ್ಲಿಯವರೆಗೂ ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಡದ ವಿಕ್ಕಿ-ಕಟ್ರೀನಾ ಇಂದು ವಿವಾಹ ಬಂಧನದಲ್ಲಿ ಜೊತೆಯಾಗಲಿದ್ದಾರೆ.
ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿ-ಕಟ್ರೀನಾ ಕಲ್ಯಾಣ ನಡೆಯುತ್ತಿದೆ. ಈ ದಿನಕ್ಕೆಂದು ಇವರಿಬ್ಬರು ಸಿಕ್ಕಾಪಟ್ಟೆ ತಯಾರಿ ಮಾಡಿದ್ದರು. ನಿನ್ನೆ ಅರಿಷಿಣ ಹಾಗೂ ಮೆಹೆಂದಿ ಶಾಸ್ತ್ರ ನಡೆದಿದ್ದು, ಇಂದು ಹಿಂದೂ ಸಂಪ್ರದಾಯದಲ್ಲಿ ಮದುವೆ ನೆರವೇರಲಿದೆ.
ಜಗಮಗಿಸುವ ಗಾಜಿನ ಮಂಟಪದಲ್ಲಿ ಮಹೂರ್ತ ನಡೆಯಲಿದೆ. ಏಳು ಬಿಳಿ ಕುದುರೆಗಳ ಜೊತೆ ವಿಕ್ಕಿ ಮಂಟಪಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಮದುವೆಗೆ ಸಾಕಷ್ಟು ನಿರ್ಬಂಧಗಳಿದ್ದು, ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ ಹಾರಾಟ ನಡೆಸದಂತೆಯೂ ಎಚ್ಚರಿಕೆ ವಹಿಸಿದ್ದಾರೆ.
ಅತಿಥಿಗಳಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ವರದಿ ತರುವಂತೆ ಮುಂಚೆಯೇ ಸೂಚಿಸಲಾಗಿದೆ. ಮದುವೆ ಫೋಟೊ, ವಿಡಿಯೋಗಳು ಲೀಕ್ ಆಗದಂತೆ ಕಟ್ರೀನಾ-ವಿಕ್ಕಿ ಜಾಗ್ರತೆ ವಹಿಸಿದ್ದಾರೆ.