ಮುಂಬೈ: ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಒಂದೂವರೆ ಸಾವಿರ ಪುಟಗಳ ಚಾರ್ಜ್ಶೀಟ್ ನಲ್ಲಿ ಅವರ ಪತ್ನಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕೂಡ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಅಶ್ಲೀಲ ಚಿತ್ರ ಪ್ರಕರಣ ವಿಚಾರವಾಗಿ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗದ ಪ್ರಾಪರ್ಟಿ ಸೆಲ್ ಬುಧವಾರ 1500 ಪುಟಗಳ ಪೂರಕ ಚಾರ್ಜ್ ಶೀಟ್ ಅನ್ನು ಎಸ್ ಪ್ಲನೇಡ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಚಾರ್ಜ್ ಶೀಟ್ ನಲ್ಲಿ ರಾಜ್ ಕುಂದ್ರಾ ಪತ್ನಿ ಶಿಲ್ಪಾಶೆಟ್ಟಿ ಮತ್ತು ಈ ಹಿಂದೆ ಕಾಮಸೂತ್ರ 3ಡಿ ಚಿತ್ರದ ನಟಿ ಶೆರ್ಲಿನ್ ಚೋಪ್ರಾ, ಸೆಜಲ್ ಶಾ, ಹಲವು ಮಾಡೆಲ್ಗಳು ಸೇರಿದಂತೆ ಸುಮಾರು 43 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.