News Karnataka Kannada
Friday, May 03 2024
ಮನರಂಜನೆ

ಈದ್ ಮಿಲಾದ್ ಹಬ್ಬಕ್ಕೆ ತೆರೆಗೆ ಬರ್ತಿದೆ ‘ಬಡೆ ಮಿಯಾ ಚೋಟೆ ಮಿಯಾ’

ಇದೇ ತಿಂಗಳ‌ 11ರ ಈದ್ ಮಿಲ್ ಹಬ್ಬಕ್ಕೆ ಅಕ್ಷಯ್ ಕುಮಾರ್ ಹಾಗೂ ಟೈಗರ್‌ ಶ್ರಾಫ್ ಜುಗಲ್ ಬಂದಿಯ ‘ಬಡೆ ಮಿಯಾನ್ ಚೋಟೆ ಮಿಯಾನ್’  ಸಿನಿಮಾದ  ತೆರೆಗೆ ಬರ್ತಿದೆ.
Photo Credit : NewsKarnataka

ಮುಂಬೈ: ಇದೇ ತಿಂಗಳ‌ 11ರ ಈದ್ ಮಿಲಾದ್ ಹಬ್ಬಕ್ಕೆ ಅಕ್ಷಯ್ ಕುಮಾರ್ ಹಾಗೂ ಟೈಗರ್‌ ಶ್ರಾಫ್ ಜುಗಲ್ ಬಂದಿಯ ‘ಬಡೆ ಮಿಯಾ ಚೋಟೆ ಮಿಯಾ’  ಸಿನಿಮಾದ  ತೆರೆಗೆ ಬರ್ತಿದೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕನಾಗಿ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್‌‌‌ ಖಳನಾಯಕನಾಗಿ ಅಭಿಯಸಿದ್ದಾರೆ. ನಾಯಕಿಯರಾಗಿ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದು,  ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು