ನಟರಾಕ್ಷಸ ಡಾಲಿ ಧನಂಜಯ್ ಜನ್ಮದಿನಕ್ಕೆ ಸಣ್ಣದೊಂದು ಝಲಕ್ ಬಿಟ್ಟು ಥ್ರಿಲ್ ಹೆಚ್ಚಿಸಿರುವ ಅಣ್ಣ ಫ್ರಂ ಮೆಕ್ಸಿಕೊ ಚಿತ್ರತಂಡ ಮುಹೂರ್ತ ಮುಗಿಸಿ ಶೂಟಿಂಗ್ ತಯಾರಾಗಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಧನು ಹಾಗೂ ಶಂಕರ್ ಗುರು ಜೋಡಿಯ ಅಣ್ಣ ಫ್ರಂ ಮೆಕ್ಸಿಕೊ ಸಿನಿಮಾದ ಮುಹೂರ್ತ ನೆರವೇರಿದೆ.
ರಾಯಲ ಸ್ಟುಡಿಯೋಸ್ ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮೆರಾಗೆ ಚಾಲನೆ ನೀಡಿದರು. ಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.
’ಅಣ್ಣ ಫ್ರಂ ಮೆಕ್ಸಿಕೊ’ಸಿನಿಮಾಪಕ್ಕ ಆಕ್ಷನ್ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದೆ. ದಿ ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದೆ.
ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದು. ಜನವರಿ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.