ಬಾಲಿವುಡ್: ಪ್ಯಾರಿಸ್ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರ್ಯಾಂಪ್ ವಾಕ್ ಮಾಡಿದ ಅನನ್ಯಾ ಪಾಂಡೆ ವಿಚಿತ್ರ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ವಿನ್ಯಾಸ ಮಾಡಿದ ಏರೋಪ್ಲೇನ್ ಚಿಟ್ಟೆಯಂತಹ ಬಟ್ಟೆ ಧರಿಸಿ ಕೀಟಗಳ ಬಗೆಗಿನ ಕಾಳಜಿಯನ್ನು ಪ್ರದರ್ಶಿಸಿದ್ದಾರೆ.
‘ನಮ್ಮೊಂದಿಗೆ ಪರಿಸರದಲ್ಲಿ ವಾಸಿಸುವ ಹಲವು ಜಾತಿಯ ಕೀಟಗಳು ಮತ್ತು ಸರೀಸೃಪಗಳೊಂದಿಗೆ ಜೀವನವನ್ನು ಹಂಚಿಕೊಳ್ಳುವ ಸೂಕ್ಷ್ಮ ವ್ಯತ್ಯಾಸಗಳತ್ತ ಗಮನ ಸೆಳೆಯುವ ರಾಹುಲ್ ಮಿಶ್ರಾ ಅವರ ‘ಸೂಪರ್ ಹೀರೋಸ್’ ಸಂಗ್ರಹದ ಹಿಂದಿನ ಕಲ್ಪನೆಯು ಇಷ್ಟವಾಯಿತು. ಗ್ರಹದಲ್ಲಿ ನಮ್ಮ ಜೀವನವನ್ನು ನಿರ್ಮಿಸುವ ಅನ್ವೇಷಣೆಯಲ್ಲಿ, ನಾವು ಅವರ ಆವಾಸಸ್ಥಾನಗಳನ್ನು ಸ್ವಾಧೀನ ಮಾಡಿಸಿಕೊಂಡಿರಬಹುದು ಮತ್ತು ಅವುಗಳನ್ನು ಅಳಿವಿನಂಚಿಗೆ ತಳ್ಳಿರಬಹುದು’ ಎಂದು ಅನನ್ಯಾ ಪೋಸ್ಟ್ ಮಾಡಿದ್ದಾರೆ.
ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ಗಳಿಸಿದೆ.