ನೆಟ್ಟಿಗನೊಬ್ಬ ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ವಯಸ್ಸಾಯ್ತು ಮದುವೆಯಾಗು ಎಂದಿದ್ದಾನೆ. ಇದಕ್ಕೆ ಗರಂ ಆದ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮದುವೆಯಾಗು ವಯಸ್ಸಾಯ್ತು ಎಂದು ನೆಟ್ಟಿಗನೊಬ್ಬ ಶಮಿತಾಗೆ ಕೆಣಕಿದ್ದಾರೆ. ಅದಕ್ಕೆ ನಟಿ, ನಿಮಗೆ ಅಭಿನಂದನೆಗಳು. ಮಿಷನ್ ಯಶಸ್ವಿಯಾಗಿದೆ. ಮದುವೆಯಾಗುವುದು ನನ್ನ ಜೀವನದಲ್ಲಿ ನನ್ನ ಏಕೈಕ ಉದ್ದೇಶವಲ್ಲ. ನಾನು ಸ್ವತಂತ್ರವಾಗಿರುವುದಕ್ಕೆ ನನಗೆ ಖುಷಿಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಜೀವನದಲ್ಲಿ ನಿಮಗೆ ಬಹಳಷ್ಟು ಪಾಸಿಟಿವಿಟಿ ಸಿಗಲಿ ಎಂದು ಹಾರೈಸುತ್ತೇನೆ. ನೀವು ಇನ್ಮುಂದೆ ಬೇರೆ ಮಹಿಳೆಯರನ್ನು ಕೆಳಗೆ ಎಳೆಯಲು ಪ್ರಯತ್ನಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ನಟಿ ತಿರುಗೇಟು ನೀಡಿದ್ದಾರೆ.