News Karnataka Kannada
Monday, April 22 2024
Cricket
ದೇಶ

ಭಾರತದಲ್ಲಿ ತಯಾರಾಗಲಿವೆ ಗೂಗಲ್‌ ಫೋನ್‌; ದೇಶದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ ಉತ್ಪಾದನೆ

ಭಾರತದಲ್ಲಿ ಫೋನ್‌ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದು, ದುಬಾರಿ ಫೋನ್‌ಗಳ ಬೇಡಿಕೆ ಹಾಗು ಮಾರಾಟ ಏರುತ್ತಿದೆ. ಹೀಗಿರುವಾಗ ಗೂಗಲ್‌ ಪಿಕ್ಸೆಲ್‌ ಫೋನ್‌ಗಳನ್ನು ಇಲ್ಲೇ ಉತ್ಪಾದನೆ ಮಾಡುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ.
Photo Credit : News Kannada

ನವದೆಹಲಿ: ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಾಗಲು ಮುಂದಾಗಿರುವ ಬಗ್ಗೆ ವರದಿಗಳು ಬರುತ್ತಿವೆ.

ಭಾರತದಲ್ಲಿ ಫೋನ್‌ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದು, ದುಬಾರಿ ಫೋನ್‌ಗಳ ಬೇಡಿಕೆ ಹಾಗು ಮಾರಾಟ ಏರುತ್ತಿದೆ. ಹೀಗಿರುವಾಗ ಗೂಗಲ್‌ ಪಿಕ್ಸೆಲ್‌ ಫೋನ್‌ಗಳನ್ನು ಇಲ್ಲೇ ಉತ್ಪಾದನೆ ಮಾಡುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ.

ಕಳೆದ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಇದರ ಪ್ರಕಾರ ಹೈ ಎಂಡ್‌ ಫೋನ್‌ ಆಗಿರುವ ಪಿಕ್ಸೆಲ್‌ 8 ಪ್ರೊ ಭಾರತದಲ್ಲಿ ಉತ್ಪಾದನೆಯಾಗುವ ಮೊದಲ ಫೋನ್‌ ಎನ್ನಲಾಗುತ್ತಿದೆ.

ಈ ಮುಂಚೆ ಪಿಕ್ಸೆಲ್‌ ಫೋನ್‌ಗಳು ಚೀನಾದಲ್ಲಿ ತಯಾರಾಗುತ್ತಿದ್ದವು. ಚೀನಾ ಹಾಗು ಅಮೆರಿಕಾದ ನಡುವೆ ನಡೆಯುತ್ತಿರುವ ತಾಂತ್ರಿಕ ಸಂಘರ್ಷದ ಫಲವಾಗಿ ಗೂಗಲ್‌ ವಿಯೆಟ್ನಾಂನಲ್ಲಿ ಫೋನ್‌ ತಯಾರಿಸುತ್ತಿತ್ತು. ಇದೀಗ ಗೂಗಲ್‌ ಭಾರತದ ಕಡೆ ಮುಖ ಮಾಡಿದ್ದು, ಇಲ್ಲಿ ತಯಾರಾದ ಫೋನುಗಳ ರಫ್ತಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು