ಚೆನ್ನೈ: ಇಂದು ಹೊಸ ರಾಜಕೀಯ ಪಕ್ಷವನ್ನು ನಟ ದಳಪತಿ ವಿಜಯ್ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರೀಯವಾಗೋ ನಿಟ್ಟಿನಲ್ಲಿ ಇನ್ಮುಂದೆ ಚಲನಚಿತ್ರಗಳಲ್ಲಿ ನಡಿಸೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ನಟನೆಗೆ ದಳಪತಿ ವಿಜಯ್ ಗುಡ್ ಬೈ ಹೇಳಿದ್ದಾರೆ.
ಈ ಕುರಿತಂತೆ ಹೊಸ ಪಕ್ಷ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಎರಡು ಚಿತ್ರಗಳನ್ನು ಈಗ ಒಪ್ಪಿಕೊಂಡಿದ್ದೇನೆ. ಅವುಗಳ ಶೂಟಿಂಗ್ ನಡೆಯುತ್ತಿದೆ. ಅವುಗಳಲ್ಲಿ ಭಾಗಿಯಾಗೋ ಕಾರಣ, ಸ್ವಲ್ಪ ದಿನ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದರು. ಒಪ್ಪಿಕೊಂಡಿರುವ ಎರಡು ಸಿನೆಮಾಗಳನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕ ಸಿನೆಮಾಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.