News Karnataka Kannada
Sunday, May 12 2024
ಮನರಂಜನೆ

ಸ್ವಾತಂತ್ರ್ಯಕ್ಕೊಂದು ಪರಿಪೂರ್ಣವಾದ ಕಿರುಚಿತ್ರ “ವಿಕ್ಕಿ” ಮಿಸ್ ಮಾಡದೇ ನೋಡಿ

Photo Credit :

ಸ್ವಾತಂತ್ರ್ಯಕ್ಕೊಂದು ಪರಿಪೂರ್ಣವಾದ ಕಿರುಚಿತ್ರ “ವಿಕ್ಕಿ” ಮಿಸ್ ಮಾಡದೇ ನೋಡಿ

ಸ್ವಾತಂತ್ರ್ಯದ ಬಗ್ಗೆ, ಬಿಡುಗಡೆಯ ಬಗ್ಗೆ ಅದೆಷ್ಟೋ ಮೇಧಾವಿಗಳು ಬರೆದಿದ್ದನ್ನು ಓದಲು ಬೋರೋ ಬೋರು ಹೊಡೆಸುವ ಈ ಕಾಲದಲ್ಲಿ ನೈಜ ಸ್ವಾತಂತ್ರ್ಯವೇನೆಂದು ಮೂಕ ಪ್ರಾಣಿ ಪಕ್ಷಿಗಳು ಚಿಕ್ಕದಾಗಿ ಚೊಕ್ಕದಾಗಿ ಹೇಳಿಬಿಟ್ಟರೆ ಒಮ್ಮೆಯಾದರು ನೋಡದವರು ಯಾರಿದ್ದಾರೆ ಹೇಳಿ?

ಮಲಯಾಳಂ ಚಿತ್ರರಂಗದ ಬೆಳೆಯುವ ಸಿರಿಗಳು ಬರೀ ಹತ್ತು ನಿಮಿಷದಲ್ಲಿ ಚಿತ್ರರಂಗದ ಘಟಾನುಘಟಿಗಳೇ ನಾಚುವಂತಹ ಅದ್ಭುತ ಕಿರುಚಿತ್ರವನ್ನು ಕಟ್ಟಿಕೊಟ್ಟಿರುವುದು ಅವರಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿ. ಮನು ಆ್ಯಂಟನಿ ಬರೆದು, ನಿರ್ದೇಶಿಸಿ ಸಂಕಲಿಸಿದ ಚಿತ್ರ “ವಿಕ್ಕಿ” ಯಲ್ಲಿ ಮುದ್ದುನಾಯಿಯೊಂದು ಪ್ರಮುಖ ಪಾತ್ರದಲ್ಲಿರುವುದು ಬಿಟ್ಟರೆ ಜೋಡಿ ಲವ್ ಬರ್ಡ್ಸ್ ಗಳು ಅಭಿನಯಿಸಿವೆ. ಪ್ರತಿಯೊಂದು ಸನ್ನಿವೇಶದಲ್ಲೂ ಮುದ್ದಾಗಿ ಅಭಿನಯಿಸಿರುವ ನಾಯಿ ವಿಕ್ಕಿ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡಿಕೊಳ್ಳುವ ಪಾತ್ರದಲ್ಲಿ ಮನುಷ್ಯರನ್ನೂ ನಾಚಿಸುತ್ತದೆ.  ಜಯೇಶ್ ಮೋಹನ್ ಛಾಯಾಗ್ರಹಣ ದಲ್ಲಿ ಕಿರುಚಿತ್ರದ ಪ್ರತಿಯೊಂದು ಫ್ರೇಮುಗಳೂ ಅದ್ಭುತ. ಸಣ್ಣ ಕಥೆಯಲ್ಲಿ ಸೊಗಸಾಗಿ ಮಿಳಿತವಾಗಿರುವ ಸುಶೀನ್ ಶ್ಯಾಂ ಸಂಗೀತ ವ್ಹಾವ್ ಅನಿಸುತ್ತದೆ. ನಾಯಿಯನ್ನು ಪಳಗಿಸಿರುವ ಪ್ರಣವ್ ಪ್ರಭಾಕರನ್ ಮತ್ತು ಶಿನು ಷಾ ಅವರಿಗೊಂದು ಸಲಾಂ.

ಗಂಟೆಗಟ್ಟಲೆ ಫೇಸ್ ಬುಕ್ಕಿನಲ್ಲಿ ಅನಗತ್ಯ ಸಂಗತಿಗಳಿಗಾಗಿ ತಡಕಾಡುವ ಬದಲು ಈ ಕಿರುಚಿತ್ರವನ್ನೊಮ್ಮೆ ನೋಡಿ ಲೈಕಿಸಿಕೊಳ್ಳಿ, ಹೊಸ ಪ್ರತಿಭೆಗಳನ್ನು ಬೆಳೆಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು