ಮುಂಬಯಿ: ಬಾಲಿವುಡ್ ನಲ್ಲಿ ಈಗಲೂ ಯುವತಿಯರನ್ನು ಸೆಳೆಯುವಂತಹ ಮೈಕಟ್ಟನ್ನು ಹೊಂದಿರುವ ಸಲ್ಮಾನ್ ಖಾನ್ ಯಾಕೆ ಮದುವೆಯಾಗುತ್ತಿಲ್ಲವೆಂದು ನಿಮಗೇನಾದರೂ ತಿಳಿದಿದೆಯಾ? ಇಲ್ಲ ತಾನೇ. ಆದರೆ ಕಾರಣ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು.
ಈಗಾಗಲೇ 52ರ ಹರೆಯದಲ್ಲಿರುವ ಸಲ್ಮಾನ್ ಖಾನ್ ಗೆ ಮಾಧ್ಯಮದವರು ಪ್ರತೀ ಸಲ ಹೇಳುವ ಪ್ರಶ್ನೆ ನೀವು ಮದುವೆ ಯಾವಾಗ ಆಗುವುದು ಎನ್ನುವುದು. ಮದುವೆಯಾಗಲು ಇಷ್ಟವಿಲ್ಲವೆಂದು ಸಲ್ಮಾನ್ ಹೇಳಿದ್ದರೂ ಜನರಿಗೆ ಮಾತ್ರ ಸಮಾಧಾನವಿಲ್ಲ. ಮತ್ತೆ ಮತ್ತೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾರೆ.
ಈ ಸಲ ಮಾಧ್ಯಮದವರು ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಿದ ಸಲ್ಲು, ಮದುವೆ ಅನ್ನುವುದು ಇಂದಿನ ದಿನಗಳಲ್ಲಿ ಲಕ್ಷಲಕ್ಷ, ಕೋಟಿಗಟ್ಟಲೆ ಹಣ ವ್ಯಹಿಸಬೇಕಾಗುತ್ತದೆ. ಇದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನಾನು ಬ್ರಹ್ಮಚಾರಿಯಾಗಿಯೇ ಇದ್ದೇನೆ ಎಂದರು.