ಸದ್ಯ ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಟ ಹೃತಿಕ್ ರೋಷನ್ ಅವರ ಮನೆಯಲ್ಲಿ ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಹಲವು ತಿಂಗಳಿಂದ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಡೇಟಿಂಗ್ ಮಾಡುತ್ತಿದ್ದಾರೆ. ಪ್ರತಿ ಹಬ್ಬದಲ್ಲೂ ಅವರು ಜೊತೆಯಾಗಿ ಸಂಭ್ರಮಿಸುತ್ತಾರೆ. ಸದ್ಯ ಹೃತಿಕ್ ರೋಷನ್ ಅವರ ಕುಟುಂಬದ ಜೊತೆ ಸಬಾ ಆಜಾದ್ ಕೂಡ ಸೇರಿಕೊಂದು ದೀಪಾವಳಿಯನ್ನು ಆಚರಿಸಿದ್ದಾರೆ. ಅವರು ಫ್ಯಾಮಿಲಿ ಜೊತೆ ಪೋಸ್ ನೀಡಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಬಾ ಆಜಾದ್ ಅವರು ಹೃತಿಕ್ ರೋಷನ್ ಫ್ಯಾಮಿಲಿಗೆ ತುಂಬ ಹತ್ತಿರವಾಗಿದ್ದಾರೆ. ಈ ಸಲ ದೀಪಾವಳಿ ಹಬ್ಬವನ್ನು ಅವರು ಜೊತೆಯಾಗಿ ಸಂಭ್ರಮಿಸುತ್ತಾರೆ. ಆ ಮೂಲಕ ಅವರಿಬ್ಬರ ಸಂಬಂಧ ಅಧಿಕೃತವಾಗಿದೆ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಜೊತೆಯಾಗಿರುವ ಫೋಟೋಗಳು ಹರಿದಾಡುತ್ತಿವೆ.