ಮುಂಬಯಿ: ಚಿತ್ರನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಪ್ರಾಣಿಗಳ ಹಕ್ಕು ಸಂಘಟನೆ ಪೆಟಾವು `ಹಿರೋ ಟು ಅನಿಮಲ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಾಣಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿರುವ ಶಿಲ್ಪಾ ಶೆಟ್ಟಿಗೆ ಈ ಗೌರವ ನೀಡಲಾಗಿದೆ.
ಸರ್ಕಸ್ ನಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಲ್ಲಿಕಟ್ಟು, ಕಂಬಳ ಮತ್ತು ಎತ್ತುಗಳ ಕಾಳಗದ ವಿರುದ್ಧ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಗೆ ಶಿಲ್ಪಾ ಸಹಿ ಹಾಕಿದ್ದರು.
ಶಿಲ್ಪಾ ಒಳ್ಳೆಯ ಸೌಂದರ್ಯ ಮತ್ತು ಹೃದಯ ಪಡೆದುಕೊಂಡಿದ್ದಾರೆ. ಅವರ ಹೃದಯವು ಪ್ರಾಣಿಗಳಿಗಾಗಿ ಮಿಡಿಯುತ್ತಿರುವುದು. ನಮ್ಮ ಕೆಲಸ ಮತ್ತು ಹೋರಾಟಗಳ ಪರವಾಗಿ ನಿಂತು ನಮಗೆ ಬೆಂಬಲ ನೀಡಿರುವ ಶಿಲ್ಪಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪೆಟಾದ ಸೆಲೆಬ್ರಿಟಿ ಆ್ಯಂಟ್ ಪಬ್ಲಿಕ್ ರಿಲೇಶನ್ ನ ಸಹಾಯಕ ನಿರ್ದೇಶಕ ಸಚಿನ್ ಬಂಗೇರ ತಿಳಿಸಿದ್ದಾರೆ.