ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿ ವಿಭಿನ್ನ ಕಥೆಯ ಮೂಲಕ ಈಗಾಗಲೇ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದು, ಇದೀಗ ಈ ಧಾರಾವಾಹಿಯಲ್ಲಿ ಹಿರಿಯ ಹೆಸರಾಂತ ನಟಿ ‘ಖುಷ್ಬೂ’ ನಟಿಸುತ್ತಿದ್ದಾರೆ. ಕನ್ನಡ ಚಿತ್ರದಲ್ಲಿ ಅಭಿನಯಿಸಿ ಈಗಾಗಲೇ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಖುಷ್ಭೂಮತ್ತೊಮ್ಮೆ ಕನ್ನಡಿಗರ ಮನಗೆಲ್ಲಲು ಬರುತ್ತಿದ್ದಾರೆ.
ಪಾರ್ವತಿಪುರದಲ್ಲಿ ಪಾರ್ವತಿ ಎಂಬ ಹೆಸರಿನಲ್ಲಿ ಅಲ್ಲಿನ ಜನರಿಗೆ ನಾಟಿ ಔಷಧಿಗಳನ್ನು ಕೊಡುತ್ತಾ, ಕಷ್ಟ ಎಂದು ಬಂದವರ ಪಾಲಿಕೆ ಪರಿಹಾರವನ್ನು ನೀಡುತ್ತಾ ಊರಿನ ಜನರಿಗೆ ದೇವತೆಯಂತೆ ಇರುವ ಪಾತ್ರ ಖುಷ್ಭೂ ಅವರದ್ದು. ಖುಷ್ಬೂ ಅಭಿನಯದ ಪಾರ್ವತಿ ಪಾತ್ರ ಇದೇ ಸೋಮವಾರದಿಂದ (31.07.2017) ನಂದಿನಿ ಧಾರಾವಾಹಿ ಉದಯ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.