ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ನಟ ‘ಕೆಜಿಎಫ್’ ಸ್ಟಾರ್ ಯಶ್ ಅವರಿಗೆ ಇಂದಿಗೆ 35 ವರ್ಷ ತುಂಬಿದೆ. ನಟ ಯಶ್ ತಮ್ಮ ನಟನೆಯಿಂದ ರಾಷ್ಟ್ರದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
‘ರಾಕಿಂಗ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಯಶ್, ಸಿನೆಮಾ ಜಗತ್ತಿನಲ್ಲಿ ಕೆಜಿಎಫ್ ಸಿನಿಮಾ ಅವರನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿತ್ತು.
ಯಶ್ ಜನ್ಮದಿನದ ನೆನಪಿಗಾಗಿ ಅವರ ಬಹುನಿರೀಕ್ಷಿತ ‘ಕೆಜಿಎಫ್: ಅಧ್ಯಾಯ 2’ ನ ಟೀಸರ್ ನಿನ್ನೆ ಬಿಡುಗಡೆಯಾಗಿದೆ.
ಯಶ್ ಅವರ ತಂದೆ ಕೆಎಸ್ಆರ್ಟಿಸಿ ಸಾರಿಗೆ ಸೇವೆಯೊಂದಿಗೆ ಬಸ್ ಚಾಲಕರಾಗಿದ್ದು, ಇಂದಿಗೂ ತಮ್ಮ ವೃತ್ತಿಯಲ್ಲಿ ಮುಂದುವರೆದಿದ್ದಾರೆ. ಟೆಲಿವಿಷನ್ ಧಾರಾವಾಹಿ ‘ನಂದ ಗೋಕುಲಾ’ ಮೂಲಕ ಯಶ್ ಚೊಚ್ಚಲ ಪ್ರವೇಶ ಮಾಡಿದರು.