Categories: ಮನರಂಜನೆ

ಮುಂದಿನ ವರ್ಷ ‘ತಿಕ್ಲ ಹುಚ್ಚ ವೆಂಕಟ್’ ಚಿತ್ರ ಬಿಡುಗಡೆ

ಮಡಿಕೇರಿ: ಕನ್ನಡ ಚಲನ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂಗಳಿಂದ ಖ್ಯಾತರಾಗಿರುವ ಹುಚ್ಚ ವೆಂಕಟ್, ತಮ್ಮ ನಿರ್ದೇಶನದ ‘ತಿಕ್ಲ ಹುಚ್ಚ ವೆಂಕಟ್’ ಚಲನಚಿತ್ರವನ್ನು ಮುಂದಿನ ಐದಾರು ತಿಂಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ತಿಕ್ಲ ಹುಚ್ಚ ವೆಂಕಟ್ ಚಿತ್ರದ ಆಡಿಯೋ ಸಿಡಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, ಪ್ರಕೃತಿ ರಮ್ಯ ತಾಣವಾದ ಕೊಡಗು ನನ್ನ ಅಚ್ಚುಮೆಚ್ಚಿನ ಸ್ಥಳವಾದ್ದರಿಂದ ಧ್ವನಿ ಸುರುಳಿ ಇಲ್ಲಿನ ಜನತೆಗೆ ತಲುಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.

ಚಲನಚಿತ್ರದ ಎಲ್ಲ ಹಾಡುಗಳನ್ನು ತಾವೇ ಬರೆದಿರುವುದಲ್ಲದೆ, ನಾಲ್ಕು ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರೊಂದಿಗೆ ಸೇರಿ ಹಾಡಿರುವುದಾಗಿ ತಿಳಿಸಿದರು. ಒಂದೆರಡು ಪಂಕ್ತಿಗಳನ್ನು ಇದೇ ಸಂದರ್ಭ ಹಾಡಿದರಲ್ಲದೆ, ತನ್ನ ಹಾಡನ್ನು ಜನತೆ ಮೆಚ್ಚಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಚಲನಚಿತ್ರದ ಹಾಡುಗಳನ್ನು ಹುಚ್ಚ ವೆಂಕಟ್ ಸೇರಿದಂತೆ ಅನುರಾಧ ಭಟ್, ವಾಣಿ ಹರಿಕೃಷ್ಣ, ಅನನ್ಯ ಭಟ್ ಹಾಡಿದ್ದು, ಸಂಗೀತವನ್ನು ಸತೀಶ್ ಬಾಬು ನೀಡಿದ್ದಾರೆ.

ಕೊಡಗಿನಲ್ಲಿ ಚಿತ್ರೀಕರಣ
ತಿಕ್ಲ ಹುಚ್ಚ ವೆಂಕಟ್ ಚಿತ್ರದ ಕೆಲವು ಹಾಡುಗಳ ಚಿತ್ರೀಕರಣವನ್ನು ಕೊಡಗಿನ ಮಡಿಕೇರಿ, ಭಾಗಮಂಡಲದಲ್ಲಿ ನಡೆಸಲಾಗುವುದು. ಇಬ್ಬರು ನಾಯಕಿಯರುಗಳಿದ್ದು, ತಾವು ನಾಯಕನ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ನಗರದ ಸ್ವಚ್ಛತೆಯ ಜವಾಬ್ದಾರಿ ಹೊತ್ತ ಪೌರ ಕಾರ್ಮಿಕರ ಸಂಕಷ್ಟದ ಬದುಕು ಸಾಗಿಸುತ್ತಿದ್ದು, ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ತಿಕ್ಲ ಹುಚ್ಚ ವೆಂಕಟ್ ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಲಾಗಿದೆ. ಇದು ತಮ್ಮ ನಾಲ್ಕನೇ ಚಲನ ಚಿತ್ರವೆಂದು ವೆಂಕಟ್ ಮಾಹಿತಿ ನೀಡಿದರು.

ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುವ ಆಸೆ ಇದೆಯಾದರು ಪ್ರಸ್ತುತ ಅದನ್ನು ಮಾಡುವುದಿಲ್ಲ ಮತ್ತು ಇತರೆ ಯಾವುದೇ ಪಕ್ಷಗಳನ್ನು ಬೆಂಬಲಿಸುವುದಿಲ್ಲ. ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ಗಮನಿಸಿ ವೈಯಕ್ತಿಕ ನೆಲೆಯಲ್ಲಷ್ಟೆ ಬೆಂಬಲಿಸುವುದಾಗಿ ವೆಂಕಟ್ ಸ್ಪಷ್ಟಪಡಿಸಿದರು.

Desk

Recent Posts

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

10 mins ago

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…

38 mins ago

ಕಾರ್ಕಳ ಜ್ಞಾನಸುಧಾ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…

43 mins ago

ಸಲ್ಮಾನ್‌ ಖಾನ್‌ ʼಸಿಕಂದರ್‌ʼಗೆ ರಶ್ಮಿಕಾ ಮಂದಣ್ಣ ನಾಯಕಿ

ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…

55 mins ago

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು

ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ 85 ಫ್ಲೈಟ್​ಗಳು ರದ್ದಾಗಿವೆ.

1 hour ago

ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…

1 hour ago