ಲಾಸ್ ವೇಗಾಸ್: ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಮ್ ವಿಭಾಗದಲ್ಲಿ ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಜಯಿಸಿದ್ದಾರೆ.
‘ಎ ಕಲರ್ ಫುಲ್ ವರ್ಲ್ಡ್’ ಆಲ್ಬಮ್ ಗಾಗಿ ಫಲ್ಗುಣಿ ಈ ಪ್ರಶಸ್ತಿ ಜಯಿಸಿದ್ದಾರೆ.’ಇಂದಿನ ಮ್ಯಾಜಿಕ್ ಅನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಗ್ರ್ಯಾಮಿ ಪ್ರೀಮಿಯರ್ ಸಮಾರಂಭದಲ್ಲಿ ಪ್ರದರ್ಶನ ನೀಡುವುದು ಮತ್ತು ನಂತರ ‘ಎ ಕಲರ್ಫುಲ್ ವರ್ಲ್ಡ್’ನಲ್ಲಿ ಕೆಲಸ ಮಾಡಿದ ಎಲ್ಲಾ ಜನರ ಪರವಾಗಿ ಈ ಪ್ರತಿಮೆಯನ್ನು ಮನೆಗೆ ಕೊಂಡೊಯ್ಯುವುದು ಎಂತಹ ಗೌರವವಿದು’ ಎಂದು ಫಲ್ಗುಣಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
“ನಾವು ಅತ್ಯಂತ ವಿನಮ್ರರಾಗಿದ್ದೇವೆ. ಈ ಪ್ರಶಸ್ತಿಗೆ ಗುರುತಿಸಿದ್ದಕ್ಕೆ ರೆಕಾರ್ಡಿಂಗ್ ಅಕಾಡೆಮಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಫಲು ಎಂದೇ ಹೆಸರಾದ ಫಲ್ಗುಣಿ ಶಾ ಬರೆದುಕೊಂಡಿದ್ದಾರೆ.
ಗಾಯಕಿ ಫಲ್ಗುಣಿ ಶಾ ಅವರು ಪ್ರಸ್ತುತ ನ್ಯೂಯಾರ್ಕ್ನಲ್ಲಿ ನೆಲೆಸಿದ್ದಾರೆ. ಅವರು ಈ ಹಿಂದೆ ಎಆರ್ ರೆಹಮಾನ್ ಅವರೊಂದಿಗೆ ಸಹ ಕೆಲಸ ಮಾಡಿದ್ದರು.