News Karnataka Kannada
Wednesday, May 01 2024
ಮನರಂಜನೆ

ಪ್ರಿಯಾಂಕ ಆತ್ಮಕಥೆ ”ಅನ್​ಫಿನಿಶ್ಡ್ “: ಕೇವಲ 12 ಗಂಟೆಗಳಲ್ಲಿ ಬೆಸ್ಟ್​ ಸೆಲ್ಲರ್​ ಪುಸ್ತಕ

Photo Credit :

ಪ್ರಿಯಾಂಕ ಆತ್ಮಕಥೆ ''ಅನ್​ಫಿನಿಶ್ಡ್

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಆತ್ಮಕಥೆ ಬರೆಯುತ್ತಿದ್ದು, ಆ ಪುಸ್ತಕವನ್ನು ರಿಲೀಸ್​ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದದ್ದು ಸುದ್ದಿಯಾಗಿತ್ತು. ಇದೀಗ ಮತ್ತೆ ಅದೇ ಪುಸ್ತಕದಿಂದಾಗಿ ಪ್ರಿಯಾಂಕಾ ಎಲ್ಲೆಡೆ ಪ್ರಚಲಿತಕ್ಕೆ ಬಂದಿದ್ದಾರೆ.

ಚೋಪ್ರಾ ತಮ್ಮ ಆತ್ಮ ಚರಿತ್ರೆಯನ್ನು 2018ರಲ್ಲೇ ಬರೆಯಲು ಆರಂಭಿಸಿದ್ದು, ಈಗ ಅದು ಮುಕ್ತಾಯಗೊಂಡಿದೆ ಎಂದು ಇತ್ತೀಚೆಗೆ ಟ್ವೀಟ್​ ಮಾಡಿದ್ದರು. ಅಕ್ಟೋಬರ್ 2 ರಂದು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆಯಾದ ಕೇವಲ 12 ಗಂಟೆಯೊಳಗೆ ಅತಿ ಹೆಚ್ಚು ಪುಸ್ತಕಗಳು ಮಾರಾಟಗೊಂಡಿದ್ದು, ಬೆಸ್ಟ್​ ಸೆಲ್ಲರ್​ ಪುಸ್ತಕಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಹಲವಾರು ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಲಿವುಡ್ ಹಾಗೂ ಹಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾಗೆ ಅನ್​ಫಿನಿಶ್ಡ್ ಪುಸ್ತಕದಿಂದ ಹೊಸದೊಂದು ಅಭಿನಂದನೆ ದೊರೆತಿದೆ. ಅವರೇ ಬರೆದಿರುವ ಆತ್ಮಕಥೆ ಅನ್​ಫಿನಿಶ್ಡ್​ ಈಗ ಯುನೈಟೆಡ್​ ಸ್ಟೇಸ್ಟ್​ನಲ್ಲಿ ಬೆಸ್ಟ್​ ಸೆಲ್ಲರ್​ ಪುಸ್ತಕ ಎನಿಸಿಕೊಂಡಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ನಟಿ ಪ್ರಿಯಾಂಕಾ ಸಾಮಾಜಿಕ ಜಾಲತಾಣಗಳ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಪೆಗ್ವಿಂಗ್​ ರ‍್ಯಾಂಡಂ ಹೌಸ್​ ಇಂಡಿಯಾ ಸಂಸ್ಥೆ ಈ ಪುಸ್ತಕವನ್ನು ಮುದ್ರಿಸಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಬಹುಮುಖ ಪ್ರತಿಭೆಗಳಾದ ಅಭಿನಯ, ಗಾಯನಗಳ ಜೊತೆಗೆ ಮತ್ತೊಂದು ಪ್ರತಿಭೆಯಾದ ಬರಹದ ನೈಪುಣ್ಯತೆ ಬೆಳಕಿಗೆ ಬಂದಿದೆ.

ಪ್ರಿಯಾಂಕಾ ಚೋಪ್ರಾ ಅವರ ಈ ಪುಸ್ತಕ ಭಾರತದಲ್ಲಿ ಮುಂದಿನ ವರ್ಷ ಜನವರಿ 19ಕ್ಕೆ ರಿಲೀಸ್​ ಆಗಲಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು