News Karnataka Kannada
Monday, April 29 2024
ಮನರಂಜನೆ

ನಾನು ಕಲಿತ ದೊಡ್ಡ ಪಾಠ ಏನು ಗೊತ್ತಾ ! ರೇಮೋ ಡಿಸೋಜ ಹೇಳ್ತಾರೆ ಕೇಳಿ

Photo Credit :

ನಾನು ಕಲಿತ ದೊಡ್ಡ ಪಾಠ ಏನು ಗೊತ್ತಾ ! ರೇಮೋ ಡಿಸೋಜ ಹೇಳ್ತಾರೆ ಕೇಳಿ

ಮುಂಬೈ: ನೃತ್ಯ ಸಂಯೋಜಕ-ಚಲನಚಿತ್ರ ನಿರ್ಮಾಪಕ ರೆಮೋ ಡಿಸೋಜ ಅವರು ನಿನ್ನೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದು, ದ್ವೇಷದ ಬದಲು ಪ್ರೀತಿಯಿಂದ ತುಂಬಿದ ಜೀವನದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಹೇಳಿದ್ದಾರೆ.

ಕಳೆದ ತಿಂಗಳು ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ನಿರ್ದೇಶಕರು, ಅವರು ಅನುಭವದ ಮೂಲಕ ಕಲಿತ ಪಾಠಗಳನ್ನು ಪ್ರತಿಬಿಂಬಿಸುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದು, ಅವರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಒಂದು ಫೋಟೋವನ್ನು ಕೂಡಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನಾನು ಕಲಿತ ಒಂದು ದೊಡ್ಡ ಪಾಠವೆಂದರೆ, ನಮ್ಮಲ್ಲಿ ಇರುವುದು ಒಂದೇ ಜೀವನ ಆದ್ದರಿಂದ ಕೇವಲ ಪರಸ್ಪರ ಪ್ರೀತಿಸಿ ದ್ವೇಷಿಸುವ ಅಗತ್ಯವಿಲ್ಲ ಎಂದಿದ್ದು, ಈ ಸಮಯದಲ್ಲೇ ವೈದ್ಯರಿಗೆ ಬೆಂಬಲವನ್ನ ಮತ್ತು ಚಿಕಿತ್ಸೆಗಾಗಿ ಧನ್ಯವಾದಗಳನ್ನ ಹೇಳಿದ್ದಾರೆ. 

2011 ರಲ್ಲಿ ‘ಫಾಲ್ಟು’ ಚಿತ್ರದ ಮೂಲಕ ಚಲನಚಿತ್ರ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುವ ಮೊದಲು ರೆಮೋ ನೃತ್ಯ ಸಂಯೋಜಕರಾಗಿ ಖ್ಯಾತಿ ಗಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
204

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು