News Karnataka Kannada
Friday, May 17 2024
ಮನರಂಜನೆ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್‌ ಕಲಾವಿದರು

Photo Credit :

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್‌ ಕಲಾವಿದರು

ಮುಂಬೈ : 2021ರ ‘ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಬಾಲಿವುಡ್‌ನ ಹಲವು ತಾರೆಯರು ಭಾಜನರಾಗಿದ್ದು, ಸಮನ್‌ಂಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ದೀಪಿಕಾ ಪಡುಕೋಣೆ , ಅಕ್ಷಯ್ ಕುಮಾರ್ , ಸುಶ್ಮಿತಾ ಸೇನ್ , ಸುಶಾಂತ್ ಸಿಂಗ್ ರಜಪೂತ್ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಜೀವನಗಾಥೆಯ , ಮೇಘನಾ ಗುಲ್ದಾರ್‌ ನಿರ್ದೇಶನದ ‘ ಚಪಾಕ್ ‘ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ಉತ್ತಮ ನಟಿ ‘ ಪ್ರಶಸ್ತಿ, ಹಾರರ್- ಕಾಮಿಡಿ ‘ ಲಕ್ಷ್ಮಿ ‘ ಚಿತ್ರದ ನಟನೆಗಾಗಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್‌ಗೆ ಉತ್ತಮ ನಟ ಪ್ರಶಸ್ತಿ ದೊರೆತಿದೆ .

ನೆಟ್ ಫಿಕ್ಸ್ನ ಗಿಲ್ಟಿ ‘ ಸಿನಿಮಾದ ಅತ್ಯುತ್ತಮ ನಟನೆಗಾಗಿ ಕಿಯಾರಾ ಅಡ್ವಾಣಿ ‘ ವಿಮರ್ಶಕರ ಉತ್ತಮ ನಟಿ ‘ ಎನಿಸಿದ್ದಾರೆ . ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ‘ ಚಿಚೋರೆ ‘ ಯಲ್ಲಿನ ಅಭಿನಯಕ್ಕಾಗಿ ಮರಣೋತ್ತರವಾಗಿ ‘ ವಿಮರ್ಶಕರ ಉತ್ತಮ ನಟ ‘ ಗೌರವ ಸಿಕ್ಕಿದೆ. ವೆಬ್ ಸೀರಿಸ್ ವಿಭಾಗದಲ್ಲಿನ ಉತ್ತಮ ನಟಿ ‘ ಪ್ರಶಸ್ತಿ “ ಆರ್ಯ ‘ ಚಿತ್ರಕ್ಕಾಗಿ ಸುಶ್ಮಿತಾ ಸೇನ್ ಪಾಲಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು