ಬೆಂಗಳೂರು: ನಟಿ ಸಂಜನಾ ಅವರ ಬೆತ್ತಲೆ ಸೀನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ದಂಡುಪಾಳ್ಯ- 2ರಲ್ಲಿ ಸಂಜನಾ ಸಂಪೂರ್ಣ ಬೆತ್ತಲಾಗಿರುವ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು, ಕಟ್ ಮಾಡಿದ ದೃಶ್ಯವನ್ನು ಈಗ ಲೀಕ್ ಮಾಡಲಾಗಿದೆ.
ವಿಡಿಯೋದಲ್ಲಿ ಕೈದಿಯಾಗಿದ್ದ ಸಂಜನಾಗೆ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ (ರವಿಶಂಕರ್) ನಗ್ನ ಗೊಳಿಸಿ ಚಿತ್ರ ಹಿಂಸೆ ನೀಡಿರುವುದು ಕಂಡು ಬಂದಿದೆ. ಒಟ್ಟಾರೆಯಾಗಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡುವ ಉದ್ದೇಶದಿಂದ ದೃಶ್ಯವನ್ನು ಲೀಕ್ ಮಾಡಲಾಗಿದೆ ಎಂದು ಹೇಳಲಾಗಿದೆ.
‘ಚಿತ್ರದಲ್ಲಿ ನಾನು ಬೆತ್ತಲಾಗಿಲ್ಲ. ಕೇವಲ ಬ್ಯಾಕ್ ಲೆಸ್ ಡ್ರೆಸ್ ಧರಿಸಿದ್ದೆ. ಹಾಗಾಗಿ ನನ್ನ ಬೆನ್ನು ಮಾತ್ರ ಬೆತ್ತಲಾಗಿತ್ತು’. ಆ ಸೀನ್ನಲ್ಲಿ ನನ್ನನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಸಂಪೂರ್ಣ ಬೆತ್ತಲಾದಂತೆ ತೋರಿಸಲಾಗಿದೆ ಎಂದು ನಟಿ ಸಂಜನಾ ಅವರು ಟ್ವೀಟ್ ಮಾಡಿದ್ದಾರೆ. ನಾನು ಪೊಲೀಸ್ ಟಾರ್ಚರ್ಗೆ ಒಳಗಾಗುವಾಗ ಅರೆಬರೆ ಬಟ್ಟೆ ತೊಟ್ಟಿದ್ದು ನಿಜ. ಆ ದೃಶ್ಯ ತೆರೆ ಮೇಲೆ ಬಂದಿದ್ದರೆ ನನ್ನ ಅಭಿನಯ ಪ್ರೇಕ್ಷಕರಿಗೆ ಗೊತ್ತಾಗುತಿತ್ತು. ಆದರೆ ಸೆನ್ಸಾರ್ ಆ ಸೀನ್ಗೆ ಕತ್ತರಿ ಹಾಕಿದೆ. ಇದು ನನಗೆ ತೀವ್ರ ಬೇಸರ ತಂದಿದೆ ಎಂದು ಸಂಜನಾ ಹೇಳಿದ್ದಾರೆ.