News Karnataka Kannada
Tuesday, May 07 2024
ಮನರಂಜನೆ

ಡಿ.16ಕ್ಕೆ ಅವತಾರ 2 ತೆರೆ ಮೇಲೆ

Avatar 2
Photo Credit :

ಹಾಲಿವುಡ್ : ಬ್ಲಾಕ್ ಬಸ್ಟರ್ ಹಾಲಿವುಡ್ ನ ಅವತಾರ್ ಸಿನಿಮಾದ ಎರಡನೇ ಅವತರಣಿಕೆಯ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಗೊಳಿಸಿದೆ. ಮುಂದಿನ ವರ್ಷ ಡಿಸೆಂಬರ್ 16 ರಂದು ಅವತಾರ್ 2,  ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ.

ಇನ್ನುಳಿದಂತೆ ಮೊದಲ ಭಾಗದ ಕೆಲ ನಟರನ್ನಷ್ಟೇ ಉಳಿಸಿಕೊಳ್ಲಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎರಡನೇ ಭಾಗದಲ್ಲಿ ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಸೇರ್ಪಡೆಗೊಂಡಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡುವ ವಿಷಯ.

ಇದರೊಂದಿಗೆ ಡಿಸ್ನಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಡಿಸ್ನಿ ತನ್ನ ಸಂಸ್ಥೆಯಿಂದ ಮುಂಬರಲಿವ ಸಿನಿಮಾಗಳ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಡಾಕ್ಟರ್ ಸ್ಟ್ರೇಂಜ್ ಮುಂದಿನ ವರ್ಷ ಮಾರ್ಚ್ 25, ಥಾರ್ ಮುಂದಿನ ವರ್ಷ ಮೇ6, ಬ್ಲ್ಯಾಕ್ ಪ್ಯಾಂಥರ್ ಜುಲೈ8, ಬ್ಲೇಡ್ 2022 ಅಕ್ಟೋಬರ್ 7 ಮಾರ್ವೆಲ್ಸ್ 2022 ನವೆಂಬರ್ 22ರಂದು ಬಿಡುಗಡೆಗೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು