News Karnataka Kannada
Sunday, May 12 2024
ಮನರಂಜನೆ

ಎರಡನೇ ದಿನ ಬರೋಬ್ಬರಿ 8.5 ಕೋಟಿ ರೂ.ಗಳನ್ನು ಬಾಚಿಕೊಂಡ ‘ಕಾಶ್ಮೀರ್ ಫೈಲ್ಸ್’ ಸಿನಿಮಾ

The Kashmir Files
Photo Credit :

‘ಕಾಶ್ಮೀರ್ ಫೈಲ್ಸ್’ ಸಿನಿಮಾ ಎರಡನೇ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲೂ ಯಶಸ್ವಿ ಕಂಡಿದ್ದು, ಬರೋಬ್ಬರಿ 8.5 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಹಲವು ಸೀಮಿತತೆಗಳ ನಡುವೆ ತೆರೆಕಂಡಿತ್ತು ಚಲನಚಿತ್ರ ಪ್ರೇಮಿಗಳ ಮೊದಲ ಆಯ್ಕೆಯಾಗಿ ಹೊರಹೊಮ್ಮಿರುವ ಚಿತ್ರವನ್ನು ಈಗಾಗಲೇ ಗಣ್ಯಾತಿಗಣ್ಯರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿರುವ ಹಲವರು ಚಿತ್ರ ಮಂದಿರದಿಂದ ಕಣ್ಣೀರಿಟ್ಟು ಹೊರ ಬಂದಿದ್ದಾರೆ.

ಇತ್ತ ಇದೇ ಸಮಯದಲ್ಲಿ ತೆರೆ ಕಂಡ ರಾಧೆ ಶ್ಯಾಮ್, ಬ್ಯಾಟ್‌ಮ್ಯಾನ್ ಮತ್ತು ಗಂಗೂಬಾಯಿ ಕಥಿಯಾವಾಡಿ ಸೇರಿದಂತೆ ದೊಡ್ಡ ಬಜೆಟ್ ಚಿತ್ರಗಳು ಚಿತ್ರಮಂದಿರಗಳಲ್ಲಿ ಓಡುತ್ತಿದ್ದರೂ ಇದರ ನಡುವೆ ಕಾಶ್ಮೀರ ಫೈಲ್ಸ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಅವರ ತಾರಾಗಣ ಒಳಗೊಂಡಿದೆ.

1990 ರಲ್ಲಿ ಕಣಿವೆಯಲ್ಲಿದ್ದ ಎಲ್ಲವನ್ನೂ ಬಿಟ್ಟು ಹೋಗಬೇಕಾದ ಐದು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಹೊರತರುವ “ಪ್ರಾಮಾಣಿಕ” ಮತ್ತು “ಶ್ರದ್ಧೆಯ” ಪ್ರಯತ್ನಕ್ಕಾಗಿ ಚಲನಚಿತ್ರವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.

‘ದಿ ಕಾಶ್ಮೀರ್ ಫೈಲ್ಸ್’ ತಂಡಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ:
‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಂಡ ಶನಿವಾರಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಚಿತ್ರವನ್ನು ಹಾಗೂ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತುಂಬ ಖುಷಿ ಆಯಿತು. ನಮ್ಮ ಸಿನಿಮಾ ಬಗ್ಗೆ ಅವರು ಹೇಳಿದ ಪ್ರಶಂಸೆಯ ಮಾತುಗಳಿಂದಾಗಿ ಈ ಭೇಟಿ ತುಂಬ ವಿಶೇಷವಾಯಿತು’ ಎಂದು ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​ ಟ್ವೀಟ್​ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು