News Karnataka Kannada
Tuesday, April 30 2024
ಮನರಂಜನೆ

ನಾಳೆಯಿಂದ ಅಮೆಜಾನ್ ಪ್ರೈಮ್ ನಲ್ಲಿ ಪುಷ್ಪಾ ಹವಾ

Pushpa
Photo Credit :

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ ಪುಷ್ಪ: ತೆರೆ ಮೇಲೆ ಭಾರೀ ಸದ್ದು ಮಾಡಿದ್ದು, ಇದೀಗ ಜನವರಿ 7 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದೆ‌.

ಈಗಾಗಲೇ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಪುಷ್ಪಾ ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಛಿದ್ರಗೊಳಿಸಿತ್ತು. ಅದರಲ್ಲೂ ಹಿಂದಿಯಲ್ಲೂ ಭಾರೀ ಹಿಟ್ ಆದ ಸಿನಿಮಾ ಸಖತ್ ಹಣ ಬಾಚಿಕೊಂಡಿತ್ತು.

ಇದೀಗ ಜನವರಿ 7 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪುಷ್ಪಾ ಸದ್ದು ಮಾಡಲು ಹೊರಟಿದ್ದು, ಈ ಬಗ್ಗೆ ಅಮೆಜ಼ಾನ್ ಪ್ರೈಮ್ ನಿ ಜನವರಿ 5ನೇ ತಾರೀಖಿನಂದು ಅಧಿಕೃತವಾಗಿ ಘೋಷಿಸಿದೆ.

ಇನ್ ಸೈಡ್ ಮೂಲಗಳ ಪ್ರಕಾರ, ಪುಷ್ಪಾ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 27-30 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬ ಸುದ್ದಿ ವರದಿಯಾಗಿದೆ‌.

ಆದರೆ ಒಂದು ಚಿತ್ರದ ಸ್ಯಾಟಲೈಟ್ ರೈಟ್ಸ್ ಮೌಲ್ಯವು OTT ಒಪ್ಪಂದಕ್ಕಿಂತ ಹೆಚ್ಚಾಗಿರುತ್ತದೆ. ಆ ಪ್ರಕಾರ 40ಕೋಟಿ ದಾಟಬಹುದು ಎಂಬುವುದು ಸಿನಿಪಂಡಿತರ ಲೆಕ್ಕಾಚಾರ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು